ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಧಕರ ಸನ್ಮಾನ ಸಮಾರಂಭವು ಪಾಣೆಮಂಗಳೂರು ಜೈನ್ ಕಂಪೌಂಡಿನಲ್ಲಿ ನಡೆಯಿತು. ಎಸ್.ಕೆ.ಪಿ.ಎ.ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯು ಸಮಾಜಮುಖಿಯಾಗಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಸಾಮಾಜಿಕ ಪ್ರಗತಿಯಲ್ಲಿ ಪೂರಕ ಪಾತ್ರ ವಹಿಸಿದೆ ಎಂದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.


ಮಾನವೀಯತೆ, ಪ್ರಾಮಾಣಿಕತೆ, ಸಹೃದಯತೆಯ ಸದ್ಗುಣವುಳ್ಳ ಚಾಯಾಗ್ರಾಹಕರು ಸಂಘಟಿತರಾಗಿ ಸಮಾಜದ ಪ್ರಗತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹವಾದುದು ಎಂದರು. ಕರೆಂಕಿ ಶ್ರೀ ದುರ್ಗಾ ಫ್ರೇಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಉಧ್ಯಮಿ ಬೈಜು ಅಗಸ್ಟಿನ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಕಾರ್ಯದರ್ಶಿ ಮಧು ಮಂಗಳೂರು, ಚಿತ್ರನಟ ರೂಪೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು.
ಅಧ್ಯಕ್ಷ ಆನಂದ್ ಯನ್., ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕೆ., ಕೋಶಾಧಿಕಾರಿ ಜಯಂತ್ ನಯನಾಡು, ನಿಯೋಜಿತ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ರವಿ ಕಲ್ಪನೆ, ಗೌರವ ಸಲಹೆಗಾರರರಾದ ಹರೀಶ್ ರಾವ್, ಸತೀಶ್ ಎಸ್.ಕುಮಾರ್. ಉಪಸ್ಥಿತರಿದ್ದರು. ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಹರೀಶ್ ಕುಂದರ್ ವಂದಿಸಿದರು. ಕಲಾವಿದ ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವನಾಥ ಸಾಲ್ಯಾನ್, ಶ್ರೀನಿವಾಸ ಪ್ರಭು ಪುತ್ತೂರು, ದಿವಾಕರ್ದಾಸ್ ಕಾವಳಕಟ್ಟೆ, ಬಾಳಪ್ಪ ಪಂಡಿತ್ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ವಿವಿಧ ಪ್ರತಿಭೆಳನ್ನು ಪುರಸ್ಕರಿಸಲಾಯಿತು. ಅನಾರೋಗ್ಯಕ್ಕೀಡಾದ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಲಾಯಿತು.

