ಉಡುಪಿ: ಒಮ್ಮೆ ಎಚ್ಐವಿ ಪೀಡಿತರಾದರೆಅದರಿಂದ ಪಾರಾಗಲು ಸಾಧ್ಯವೇಇಲ್ಲ. ಆದರೆ ಕೆಲವು ನಿಯಮಗಳನ್ನು ಕಾರ್ಯಗತಗಿಳಿಸಿದಲ್ಲಿ, ನಿರ್ದಿಷ್ಟ ಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ನೀಡುವಔಷಧವನ್ನುಕ್ರಮವತ್ತಾಗಿ ಸೇವನೆ ಮಾಡುತ್ತಿದ್ದಲ್ಲಿ ಎಚ್ಐವಿ ಎಡ್ಸಾಗಿ ಪರಿವರ್ತನೆಗೊಳ್ಳದಂತೆ ತಡೆಯಲು ಸಾಧ್ಯ. ಆ ಮೂಲಕ ಜೀವಿತ ಅವಧಿ ಹೆಚ್ಚಾಗುವುದು.ಆದ ಕಾರಣ ಎಚ್ಐವಿ ಪೀಡೆಗೊಳಗಾದವರು ಧೈರ್ಯ ಕಳೆದುಕೊಂಡು ಖಿನ್ನರಾಗಿ ಒತ್ತಡಕ್ಕೆ ಒಳಗಾಗ ಬಾರದು.ಮೌನ ಮುರಿದು ಮಾತಾಡಬೇಕುಎಂಬುದಾಗಿ ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಎಚ್ಐವಿ ಪೀಡೆತೆಯಾಗಿರುವ, ಜೀವನ ಸಂಘರ್ಷ ಸ್ವಯಂ ಸೇವಾ ಸಂಘದ ಕಾರ್ಯದರ್ಶಿ ವೀಣಾ ಶೆಟ್ಟಿ ಆದಿ ಉಡುಪಿಯ ಸೆರಾಕೇರ್ಕೇಂದ್ರದಲ್ಲಿ ಡಿ. 16ರಂದು ಜರಗಿದ ಎಚ್ಐವಿ, ಏಡ್ಸ್ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡುತ್ತಾ ತಿಳಿಸಿದರು.ತನ್ನ ಸಂಸ್ಥೆ ಎಚ್ಐವಿ ಪೀಡಿತರಿಗೆ ನೀಡುವ ಸೇವೆಯಿಂದ, ಸ್ವನುಭವದಿಂದ ಸಭೆಯಲ್ಲಿ ಪಾಲುಗೊಂಡವರು ವ್ಯಕ್ತಪಡಿಸಿದ ಸಂಶಯಗಳಿಗೆ ಉತ್ತರಿಸಿದರು.IMG_20151216_124724

ಎಚ್ಐವಿ ಎಡ್ಸ್ನ ಬುನಾದಿ.ಎಡ್ಸ್ ಪ್ರಾರಂಭದ ಪಂಚಾಂಗ. ಎಚ್ಐವಿ ತಗಲುವ ವಿವಿಧ ಕಾರಣಗಳನ್ನು ವಿಶೇಷವಾಗಿ ಯುವಕರು, ಯುವತಿಯರು ತಿಳಿದುಕೊಂಡು ಜಾಗ್ರತೆ ವಹಿಸಿದಲ್ಲಿ ಎಡ್ಸ್ ಹರಡುವುದನ್ನು ತಡೆಯಬಹುದು. ಆದುದರಿಂದ ಈ ವಿಚಾರವಾಗಿ ತಿಳುವಳಿಕೆ ನೀಡುವ ಕಾರ್ಯಕ್ರಮಗಳ ಸದುಪಯೋಗವನ್ನುಜನರು ಮಾಡಿಕೊಳ್ಳಬೇಕೆಂದು ಸಭೆಯಅತಿಥಿ ಕರ್ನಾಟಕ ರಾಜ್ಯ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತು ಸದಸ್ಯರ ತರಬೇತಿಯ ರಾಜ್ಯ ಮಾಜಿ ಸಂಪನ್ಮೂಲ ವ್ಯಕ್ತಿ ಎಸ್ಎಸ್ತೋನ್ಸೆ ಸಭೆಯನ್ನುದ್ದೇಶಿಸಿ ಮಾತಾಡುತ್ತಾ ವಿವರಿಸಿದರು.
ದಿನ ಒಂದಕ್ಕೆ ಕೇಂದ್ರದ ಉಚಿತ ಸೌಲಭ್ಯವನ್ನು ಪಡೆಯುತ್ತಿರುವ ಸುಮಾರು 800 ಕ್ಕಿಂತಲೂ ಹೆಚ್ಚು ಸಾಧಕರ ಪರವಾಗಿ ವೀಣಾ ಶೆಟ್ಟಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೇಂದ್ರದ ಮುಖ್ಯಸ್ಥ ಪ್ರದೀಪ್ಕುಮಾರ್ ಬೈಲಕೆರೆ ಸ್ವಾಗತಿಸಿದರು.ಕಾರ್ಯನಿರ್ವಹಕಿ ಲಕ್ಷ್ಮೀತಾ ಬಾಪುತೋಟ ವಂದಿಸಿದರು.

By suddi9

Leave a Reply

Your email address will not be published. Required fields are marked *