ಬಂಟ್ವಾಳ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯವಿರುವಂತಹ ಪಕ್ಷ. ಎಲ್ಲಾ ಧರ್ಮ ಜಾತಿ ಭಾಷೆಯವರನ್ನು ಪ್ರೀತಿಯಿಂದ ಕೊಂಡೊಯ್ಯುವ ಪಕ್ಷ . ಬಡವರಿಗೆ ಭೂಮಿ ಕೊಟ್ಟ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಶಿಕ್ಷಣ ಕ್ಷೇತ್ರದಲ್ಲಿ ಸಿಇಟಿ ಯೋಜನೆಯನ್ನು ತಂದ ಪಕ್ಷ ಕಾಂಗ್ರೆಸ್ ಪಕ್ಷ, ಪಡಿತರ ಚೀಟಿಯ ನ್ಯೂನತೆಯನ್ನು ಸರಿಪಡಿಸಲಾಗುವುದು ಎಂದು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು.
ಅವರು ವಲಯ ಕಾಂಗ್ರೆಸ್ ಸಜಿಪ ಮೂಡ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಸುಭಾಷ್ ನಗರ ಸಜಿಪಮೂಡ ದಲ್ಲಿ ಜರಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತಾನಾಡುತ್ತಿದ್ದರು.


ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುಣಾವಣೆಯ ಪೂರ್ವಸಿದ್ಧತೆ ಕುರಿತು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ತಾ.ಪಂ.ಸದಸ್ಯ ಪುಷ್ಪಾವತಿ, ಸಜಿಪ ಮೂಡ ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್, ಉಪಾಧ್ಯಕ್ಷ ವೀಣಾ ಮಿರಾಂದ, ಹೈದರ್, ಬಿ.ಕೆ.ಇದಿನಬ್ಬ, ಯೂಸುಫ್ ಕರಂದಾಡಿ, ಮಧುಸೂದನ್ ಶೆಣೈ, ಗ್ರಾ.ಪಂ.ಸದಸ್ಯರಾದ ವಿಶ್ವನಾಥ ಬೆಳ್ಚಡ, ರಮೇಶ ಎಂ., ಅಬ್ದುಲ್ ಕುಂಞಿ, ಸರಸ್ವತಿ ಭಟ್, ಹರಿಣಾಕ್ಷಿ ಆರ್, ಯಮುನಾ, ತುಮಿನಾ ಡಿಸೋಜ, ಸುಂದರಿ , ಯಮುನಾ ಕೆ., ಚಂಚಲಾಕ್ಷಿ ಉಪಸ್ಥಿತರಿದ್ದರು.
ಭೂ ಬ್ಯಾಂಕ್ ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಸ್ವಾಗತಿಸಿದರು. ವಲು ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಝೀಝ್ ವಂದಿಸಿ, ಗಿರೀಶ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
