ಬಜಪೆ:ಬಜಪೆಯಿಂದ ಬೈಕಂಪಾಡಿಗೆ ತೆರಳುವ ಖಾಸಾಗಿ ಬಸ್ಸು ಪೊರ್ಕೋಡಿ ಎಂಬಲ್ಲಿ ಅತೀ ವೇಗದಿಂದ ಚಾಲಾಯಿಸುತ್ತದ್ದ ಬಸ್ಸು ರಸ್ತೆ ಪಕ್ಕದ ಮರಕ್ಕೆ ಅಪ್ಪಲಿಸಿಕೊಂಡು ಮುಂದುವರಿಯುತ್ತಿದ್ದ ವೇಳೆ ಸ್ಥಳೀಯರು ಬಸ್ಸನ್ನು ನಿಲ್ಲಿಸಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ಈ ನಡುವೆ ಬಸ್ಸು ಚಾಲಕ ಇದೇ ರೀತಿ ಅತೀ ವೇಗ ಹಾಗೂ ಅಜಾಗುರುಕತಯಿಂದ ಬಸ್ಸು ಚಾಲಾಯಿಸುತ್ತಿದ್ದಾಗ ಸ್ಥಳೀಯರು ಬಸ್ಸು ಚಾಲಕನಿಗೆ ಎಚ್ಚರಿಕೆ ನೀಡಿದರು.
ಸೋಮವಾರ ಪೊರ್ಕೋಡಿ ಬಸ್ಸು ನಿಲ್ದಾಣದ ಬಳಿ ಇದೇ ರೀತಿಯ ಘಟನೆ ಮರುಕಳಿಸಿದಾಗ ಸ್ಥಳಿಯರೂ ಒಟ್ಟಾಗಿ ಬಸ್ಸು ನಿಲ್ಲಿಸಿ ಬಜಪೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದು ಇನ್ಸೆಪಕ್ಟರ್ ಟಿ. ಡಿ. ನಾಗರಾಜ್ ಹಾಗೂ ಎಸ್ ಐ ರಮೇಶ್ ಹಾನಾಪುರ ಅವರ ನೇತೃತ್ವದಲ್ಲಿ ಪೋಲಿಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು.
ಸ್ಥಳಿಯರು ಬಸ್ಸಿನ ಚಾಲಕ ಹಾಗೂ ಮಾಲಕರ ವಿರುದ್ದ ದೂರು ನೀಡಿದ್ದು ಬಸ್ಸಿನ ಚಾಲಕ ಹಾಗೂ ಮಾಲಕರು ಸ್ಥಳಿಯರ ವಿರುದ್ದ ಬಸ್ಸು ತಡೆದು ಹಲ್ಲೆಗೆ ಯತ್ನಿಸಿದ್ದಾಗಿ ದೂರು ನೀಡಿದ್ದಾರೆ. ಈ ಮಧ್ಯೆ ಬಸ್ಸಿನ ಚಾಲಕ ಮಾಲಕ ಹಾಗೂ ಸ್ಥಳಿಯರನ್ನು ವಿಚಾರಣೆಗಾಗಿ ಪೋಲಿಸ್ ಠಾಣೆಗೆ ಕರೆಯಿಸಿದ್ದ ವೇಳೆ ಠಾಣೆಯ ಹೊರಾಂಗಣದಲ್ಲಿ ಎರಡು ಕಡೆಯವರ ಮಧ್ಯೆ ಹೊಡೆದಾಟ ನಡೆದಿದ್ದು ಪೋಲಿಸರು ಎರಡು ಕಡೆಯವರ ಮೇಲೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದು ಎರಡು ಕಡೆಯಿಂದ ಒಟ್ಟು ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

