ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 15ರಿಂದ ಮೊದಲ್ಗೊಂಡು 17ರತನಕ ವಾರ್ಷಿಕ ಪಂಚಮಿ ಮತ್ತು ಷಷ್ಠಿ ಮಹೋತ್ಸವ ನಡೆಯಲಿದೆ.
15ರಂದು ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ ಪವಮಾನ ಅಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಇಲ್ಲಿನ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಟ್ರಸ್ಟಿನ ವತಿಯಿಂದ ನೃತ್ಯ ಭಜನೆ ನಡೆಯಲಿದೆ.
16ರಂದು ಬೆಳಿಗ್ಗೆ ಪವಮಾನ ಅಭಿಷೇಕ, ನವಕ ಕಲಶಾಭಿಷೇಕ, ಗಣಹೋಮ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ‘ಏಕಾದಶ ರುದ್ರಾಭಿಷೇಕ’, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಕ್ಕಳ ತಂಡದಿಂದ ಭಜನೆ, ರಾತ್ರಿ ರಂಗಪೂಜೆ ಮತ್ತು ‘ಪಂಚಮಿ ಉತ್ಸವ’ ನಡೆಯಲಿದೆ. ಇದೇ ವೇಳೆ ಬಂಟ್ವಾಳ ಸುಮನಸ ಯಕ್ಷ ಬಳಗ ತಂಡದಿಂದ ‘ಶ್ರೀದೇವಿ ವೈಷ್ಣವಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
17ರಂದು ಬೆಳಿಗ್ಗೆ ಉಷಾಪೂಜೆ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ, ಸ್ಕಂದ ಯಾಗ, ಸಾಮೂಹಿಕ ಆಶ್ಲ್ಲೇಷಾ ಬಲಿ, ವಾರ್ಷಿಕ ‘ಷಷ್ಠಿ ಮಹೋತ್ಸವ’, ದೇವರ ಬಲಿ ಮತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಅಂದು ಸಂಜೆ ಭಜನೆ ಮತ್ತು ಪರಿವಾರ ದೈವ ಮಹಿಸಂದಾಯ, ರಕ್ತೇಶ್ವರಿ, ಕಲ್ಲುರ್ಟಿ , ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *