ಬಂಟ್ವಾಳ: ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನು ಮರು ಸರ್ವೆ  ತಯಾರಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಸುಭಾಶ್ ಅಡಿ ಅವರು ಮಂಗಳೂರು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಆದೇಶಿಸಿದ್ದಾರೆ. ಜಮೀನಿನ ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ತಯಾರಿಸಲಾದ ನಕ್ಷೆಗೆ ಆಕ್ಷೇಪ ಸಲ್ಲಿಸಿದ್ದರಿಂದ ಪ್ರಕರಣವನ್ನು ಖುದ್ಧು ಪರಿಶೀಲಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸಹಾಯಕ ಕಮಿಷನರ್ ಡಾ. ಅಶೋಕ್ ಅವರಿಗೆ ಆದೇಶಿಸಿದ್ದಾರೆ.

ನರಿಕೊಂಬು ಗ್ರಾಮದ ಸರ್ವೆ  ನಂಬ್ರ 50/1ಎರಲ್ಲಿ 1.49 ಎಕರೆ ಹಾಗೂ 52/1ಎ1ಪಿರಲ್ಲಿ 2 ಎಕರೆ ಜಮೀನಿನ ಮೂಲ ನಕ್ಷೆಯನ್ನು ಆಧರಿಸಿ, ವಾಸ್ತವಾಂಶದ ಕುರಿತು ಸರ್ವೆ  ಕಾರ್ಯ ನಡೆಸಿ, ಅತಿಕ್ರಮಣವನ್ನು ಗುರುತಿಸಿ ವರದಿ ಸಲ್ಲಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇ ಶಕರಿಗೆ ಸಹಾಯಕ ಕಮಿಷನರ್ ಸೂಚಿಸಿದ್ದಾರೆ.  ಪ್ರಕರಣವನ್ನು ಅತಿ ಜರೂರಾಗಿ ಪರಿಗಣಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ

By suddi9

Leave a Reply

Your email address will not be published. Required fields are marked *