ಬಂಟ್ವಾಳ, ಡಿ. 4: ಮಂಗಳೂರಿಂದ ಮರಳು ಸಾಗಾಟದ ಒಟ್ಟು 20 ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ಫರಂಗಿಪೇಟೆ ಮತ್ತು ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದು ತನಿಖೆಗೆ ಒಳ ಪಡಿಸಲಾಗಿದೆ.

ಫರಂಗಿಪೇಟೆಯಲ್ಲಿ 8 ಲಾರಿಗಳನ್ನು, ಬಿ.ಸಿ.ರೋಡಿನಲ್ಲಿ 12 ಲಾರಿಗಳನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಕೆಲವಕ್ಕೆ ಮರಳು ಸಾಗಾಟಕ್ಕೆ ಪೂವರ್ಾನುಮತಿ ಇರುವುದಾದರೂ ನಿಗದಿತ ಭಾರಕ್ಕಿಂತ ಹೆಚ್ಚು ಮರಳನ್ನು ತುಂಬಿಸಿದ್ದು ಹೆಚ್ಚುವರಿ ತೂಕವನ್ನು ಲೆಕ್ಕಹಾಕಿ ದಂಡವನ್ನು ವಸೂಲಿ ಮಾಡುವುದಾಗಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ನೇತ್ರಾವತಿ ನದಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಕ್ರಮ ಮರಳನ್ನು ತೆಗೆಯುವುದು ಈಗ ನಿಲುಗಡೆ ಮಾಡಿದ್ದು ಪ್ರಸ್ತುತ ಸ್ಥಳೀಯವಾಗಿ ಸಮಸ್ಯೆ ಇಲ್ಲ. ಆದರೆ ಮಂಗಳೂರು ಕಡೆಯಿಂದ ಬರುವ ಲಾರಿಗಳಲ್ಲಿ ಅಕ್ರಮ ಸಾಗಾಟದ ಬಗ್ಗೆ ಜಿಲ್ಲಾಕಾರಿಗಳ ಸೂಚನೆಯಂತೆ ಕಟ್ಟು ನಿಟ್ಟಿನ ತಪಾಸಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
