ಬಂಟ್ವಾಳ: ಡಿ.4 .ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತವರ್ಷಾಚರಣೆಯ ಪ್ರಯುಕ್ತ ರಜತವರ್ಷಾಚರಣೆ ಸಮಿತಿ, ಕಾರ್ಯನಿರತಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ನಡೆದ ಎಸ್ಪಿಯೊಂದಿಗೆ ಮಾತುಕತೆ ಸಂವಾದ ಹಾಗೂ ಬಂಟ್ವಾಳ ಪೊಲೀಸ್ ಉಪವಿಭಾಗದಿಂದ ಬಂಟ್ವಾಳ ಹಾಗೂ ಬೆಳ್ತಂಗಡಿಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನೀಡಲ್ಪಟ್ಟ ಮಾಧ್ಯಮ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.2

27

28

17

25

26

 

8

9

10

13

20

29

9

24ಜಿಲ್ಲೆಯಲ್ಲಿ 28 ಗ್ರಾಮಗಳು ನಕ್ಸಲ್ ಬಾದಿತ ಪ್ರದೇಶಗಳಾಗಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಗಡಿಭಾಗದಲ್ಲಿ ನಕ್ಸಲರು ತಳವೂರಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲೂ ನಿರಂತರ ಕಣ್ಗಾವಲು ಇಟ್ಟುಕೊಂಡಿದ್ದೇವೆ. ಜೂನ್ ತಿಂಗಳಿನಲ್ಲಿ ಬೆಳ್ತಂಗಡಿಯಲ್ಲಿ ಮನೆಯೊಂದಕ್ಕೆ ನಕ್ಸಲರು ಭೇಟಿ ನೀಡಿದ್ದು ಬಿಟ್ಟರೆ ನಕ್ಸಲ್ ಚಟುವಟಿಕೆ ಸದ್ಯಕ್ಕೆ ಬೇರೆಲ್ಲೂ ಕಂಡು ಬಂದಿಲ್ಲ. ಆದರೂ ಪೊಲೀಸ್ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ ಎಂದು ಎಸ್ಪಿ ಹೇಳಿದರು.

ಮಾಧ್ಯಮದಲ್ಲಿ ಕೆಲಸ ಮಾಡುವವರ ಹೊರತು ಪಡಿಸಿ ಪ್ರೆಸ್ ಅಧಿಕೃತ ಧಾಖಲೆ ಇಲ್ಲದೆ ದುರ್ಬಳಕೆ ಮಾಡುವ ಕೆಲಸ ವಾಗುತ್ತದೆ. ಇಂತಹ ಅವ್ಯವಸ್ಥೆಯನ್ನು ತಡೆಗಟ್ಟಲು ನೊಂದಾಯಿತ ಸಂಘದ ಮೂಲಕ ಕಾರ್ಯನಿರತ ಪತ್ರಕರ್ತರಿಗೆ ಪೊಲಿಸ್ ಇಲಾಖೆಯಿಂದಲೇ ಸ್ಟಿಕ್ಕರ್ ನೀಡಲು ನಿರ್ಧರಿಸಲಾಗಿದೆ. ಇದರಿಂದ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯ ಎಂದು ಎಸ್ಪಿ ತಿಳಿಸಿದರು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಎಲ್ಲರೂ ಒಗ್ಗಟ್ಟಾಗಿ ಪೊಲೀಸ್ ಇಲಾಖೆೆಯೊಂದಿಗೆ ಕೈ ಜೋಡಿಸಬೇಕು.

ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ಮಾಡಬೇಕು, ಶಿಕ್ಷಣ ಪಡೆದು ದಾರಿ ತಪ್ಪುವ ಯುವಕರಿಗೆ ಉದ್ಯೋಗ ಕಲ್ಪಿಸುವ ಹಾಗೂ ಸರಿಯಾದ ದಾರಿಯಲ್ಲಿ ಮುಂದುವರೆಯುವ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದರು. ಅಪರಾಧ ಪ್ರಕರಣಗಳಲ್ಲಿ ಶೇ 70ರಷ್ಟು ಅಮಾಯಕರೇ ಬಲಿಯಾಗುತ್ತಾರೆ, ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆರಕ್ಷಕ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದ ಅವರು ಗಲಭೆಗಳ ಸಂದರ್ಭ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು, ಸರಿಯಾದ ಸಂದೇಶವನ್ನು ಸಮಾಜಕ್ಕೆ ನೀಡಬೇಕು, ಸಮಾನ ಮನಸ್ಸಿನಿಂದ ಎಲ್ಲರೂ ಸೇರಿ ಕೈಜೋಡಿಸಿದಾಗ ಬದಲಾವಣೆ ಸಾಧ್ಯ ಎಂದು ತಿಳಿಸಿದರು. ಜನಸಂಖ್ಯೆಗನುಗುಣವಾಗಿ ಸಿಬ್ಬಂದಿ ಕೊರತೆ ಇದೆ. 323 ಹೆಚ್ಚುವರಿ ಸಿಬ್ಬಂದಿ ಕೇಳಲಾಗಿದೆ. ಹೊಸ ಕರ್ತವ್ಯಗಳು ಬಂದಿದೆ ಹೊರತು ಬಲವರ್ಧನೆಯಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು.

ಬಂಟ್ವಾಳ ಪೊಲೀಸ್ ಉಪವಿಭಾಗದಿಂದ ಬಂಟ್ವಾಳ ಹಾಗೂ ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನೀಡಲ್ಪಟ್ಟ ಸ್ಟಿಕ್ಕರ್  ಅನ್ನು  ಎಸ್ಪಿಯವರು ಹಸ್ತಾಂತರಿಸಿದರು. ಈ ಸಂದರ್ಭ ಪುತ್ತೂರು ಎಎಸ್ಪಿ ರಿಷ್ಯಂತ್, ಬಂಟ್ವಾಳ ಪ್ರಭಾರ ಎಎಸ್ಪಿ ಭಾಸ್ಕರ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ  ಶ್ರೀನಿವಾಸ ನಾಯಕ್ ಇಂದಾಜೆ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ  ಭುವನೇಶ್ ಗೇರುಕಟ್ಟೆ, ರಜತವರ್ಷಾಚರಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ, ಸಂಚಾಲಕ ವೆಂಕಟೇಶ್ ಬಂಟ್ವಾಳ್, ಸಂಘದ ಪ್ರಧಾನಕಾರ್ಯದರ್ಶಿ  ನಿಶಾಂತ್ ಬಿಲ್ಲಂಪದವು, ನಗರ ಠಾಣಾ ಎಸೈ ನಂದ ಕುಮಾರ್ ಮತ್ತಿತರು ಹಾಜರಿದ್ದರು.
ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಸ್ವಾಗತಿಸಿದರು, ರಜತ ವರ್ಷಾಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ  ಸಂದೀಪ್ ಸಾಲ್ಯಾನ್ ವಂದಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *