ವಿಟ್ಲ:ವಿಠಲ ವಿದ್ಯಾ ಸಂಘ ವಿಟ್ಲ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಹಬ್ಬವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಡಿ. 2ರಂದು ರಂದು ಬುಧವಾರ ನಡೆಯಿತು. ಮುಖ್ಯ ಅತಿಥಿಯಾಗಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಭಟ್ ಎನ್ ಭಾಗವಹಿಸಿ ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾನು ಈ ವಿದ್ಯಾ ಸಂಸ್ಥೆಯ ಹಳೆವಿದ್ಯಾರ್ಥಿಯಾಗಿದ್ದು ಗುರುವೊಬ್ಬರು ಸೂಚಿಸಿದ ಗುರಿ ತನ್ನನ್ನು ಈ ಸ್ಥಾನಕ್ಕೆ ಏರಿಸಿದೆ. ಮತ್ತು ಆ ಮಾರ್ಗದರ್ಶನ ಧನಾತ್ಮಕ ಪರಿಣಾಮ ಬೀರಿತು. ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಪ್ರೌಢ ಶಾಲೆಯ ಕೊನೆ ಹಂತದ ವರೆಗೆ ಗುರಿ ಬಗ್ಗೆ ಚಿಂತನೆ ಇಲ್ಲ. ಇಂತಹ ಸಂದರ್ಭದಲ್ಲಿ ಪೋಷಕರು ಗುರುಗಳೊಂದಿಗೆ ಚರ್ಚಿಸಿ ಆಯ್ಕೆ ಮಾಡಬೇಕು. ಮೊಬೈಲ್, ದೂರದರ್ಶನಗಳನ್ನು ಸದುಪಯೋಗಕ್ಕೆ ಮಾತ್ರ ಬಳಸಬೇಕು ಮತ್ತು ಅದರ ದಾಸರಾಗಬೇಡಿ’ ಎಂದರು.
ವೇದಿಕರಯಲ್ಲಿದ್ದ ವಿಠಲ ವಿದ್ಯಾ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ವರ್ಮ ಅರಸರು `ವಿದ್ಯಾರ್ಥಿಗಳು ಹೆತ್ತವರಿಂದ , ಸಂಘ ಸಂಸ್ಥೆಗಳಿಂದ ಸಿಗುವ ಪ್ರೋತ್ಸಾಹ, ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಿ’ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಬಿ ರಾಧಾಕೃಷ್ಣ ಭಟ್ `ಮಾತೃಭ್ಯೋ ನಮಃ’ ಎಂದು ತಂದೆ ತಾಯಿಯರು ಎರಡು ಕಣ್ಣುಗಳಿಗೆ ಸಮ. ಹಣಕ್ಕಿಂತ ಗುಣ ಮುಖ್ಯ. ಸಮಾನ ನೀರು ಗೊಬ್ಬರ ಪೂರೈಸಿದರೂ ಮರ ಗಿಡಗಳಲ್ಲಿ ಇಳುವರಿ ವ್ಯತ್ಯಯಗೊಳ್ಳುವುದು, ಅದೇ ರೀತಿ ಎಲ್ಲಾ ವಿದ್ಯಾರ್ಥಿ ಗಳಿಂದ ಸಮಾನ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಸೋತವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸ್ಪೂರ್ತಿ ತುಂಬಬೇಕು. ಮನಸ್ಸಿನಲ್ಲಿ ಪ್ರೀತಿ ದಯೆ ಮಾನವೀಯ ಮೌಲ್ಯಗಳಿರಲಿ. ಸಂತೋಷವಿಲ್ಲದ ಹೃದಯದಲ್ಲಿ ದ್ವೇಷ, ಆಕ್ರೋಶ, ರಾಕ್ಷಸೀ ಪ್ರವೃತ್ತಿಗಳನ್ನು ಬೆಳೆಸಿಕೊಂಡರೆ ಸಮಾಜಕ್ಕೆ ಅವುಗಳೇ ನಮ್ಮ ಕೊಡುಗೆಯಾಗುತ್ತದೆ. ಅದಾಗದಂತೆ ಜಾಗೃತರಾಗಿಬೇಕು. ದೇಶಪ್ರೇಮ ಮುಖ್ಯ, ಉಪಕಾರ ಸ್ಮರಣೆ ಇರಬೇಕು. ತಿಳುವಳಿಕೆಇದ್ದವರು ಹಣ್ಣಿದ್ದ ಕೊಂಬೆಯಂತೆ ಬಾಗಿ ವಿನಯಶೀಲರಾಗಿರುತ್ತಾರೆ’ ಎಂದರು.
ವೇದಿಕೆಯಲ್ಲಿ ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ದತ್ತಿ ನಿಧಿ ಬಹುಮಾನ, ಸಾಹಿತ್ಯಿಕ ಸ್ಪರ್ಧೆಯ ಬಹುಮಾನ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ , ಹಾಗೂ ಕಾಲೇಜು ಕ್ರೀಡಾಕೂಟದಲ್ಲಿ ವಿಜೇತರಿಗೆ ಪದಕ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಕಾಲೇಜಿನ ವಾರ್ಷಿಕ ವರದಿಯನ್ನು ಹಾಗೂ ವಿಠಲ ಸುಪ್ರಜಿತ್ ಐಟಿಐ ಯ ವಾರ್ಷಿಕ ವರದಿನ್ನು ವಾಚಿಸಿದರು. ಉಪನ್ಯಾಸಕ ಶಂಕರನಾರಾಯಣ ಭಟ್ ಅತಿಥಿಗಳನ್ನು ಪರಿಚಯಿಸಿದರು. ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ ವಂದಿಸಿದರು. ನಿಶಾಬಾನು ಮತ್ತು ಚೈತ್ರಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು




