ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸಾಯಿ ಮಧು ಎಂಟರ್ ಪಪ್ರೈಸಸ್ ವಿಟ್ಲ ತಂಡ, ದ್ವಿತೀಯ ಸ್ಥಾನ ಆಳ್ವಾಸ್ ಮೂಡಬಿದ್ರೆ, ತೃತೀಯ ಸ್ಥಾನ ನವಯುಗ ಕುಕ್ಕಾಜೆ ಮತ್ತು ಚತುರ್ಥ ಸ್ಥಾನ ವರುಣ್ ಟ್ರಾವೆಲ್ಸ್ ಪಡೆದುರುತ್ತದೆ.
ಉತ್ತಮ ದಾಳಿಗಾರ ರೋಹಿತ್ ಮಾರ್ಲ ಮಧು ಎಂಟರ್ ಪ್ರೈಸಸ್ , ಉತ್ತಮ ಹಿಡಿತ ಗಾರ ಜಸ್ವಂತ್ ಮತ್ತು ಸ್ಯವಸಾಚಿ ಭರತ್ ಶೆಟ್ಟಿ ಅಬೀರಿ ಆಳ್ವಾಸ್ ಇವರು ಪಡೆದಿರುತ್ತಾರೆ. ಡಾ| ಪ್ರಸಾದ್ ಭಂಡಾರಿ ಮತ್ತು ಅರುಣ್ ಪುತ್ತಿಲ ಶುಭಹಾರೈಸಿದರು. ರೋಹಿತ್ ಮಾರ್ಲ ಮತ್ತು ಹೆಚ್ ಸುಬ್ರಹ್ಮಣ್ಯ ಭಟ್ ಇವರನ್ನು ಸನ್ಮಾನಿಸಲಾಯಿತು. ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ಜಿಲ್ಲಾಧ್ಯಕ್ಷ ರತನ್, ಕಾರ್ಯದಶರ್ಿ ಪುರುಷೋತ್ತಮ್ ಪೂಜಾರಿ, ಸ್ವಸ್ತಿಕ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ನಾಗೇಶ್ ಬಸವನಗುಡಿ, ಅಧ್ಯಕ್ಷ ಸುದರ್ಶನ್, ಜಗನ್ನಾಥ ಕಾಸರಗೋಡ್, ವೆಂಕಟೇಶ್ವರ ಅಮೈ, ರವಿಪ್ರಕಾಶ್, ದಯಾನಂದ ಉಜಿರೆಮಾರು, ಮೋಹನ್ ಸೇರಾಜೆ, ದಿನಕರ ಭಟ್ ಮಾವೆ, ಜತ್ತಪ್ಪ ಗೌಡ ಹಾಗು ಸ್ವಸ್ತಿಕ್ ಫ್ರೆಂಡ್ಸ್ನ ಸದಸ್ಯರು ಉಪಸ್ಥಿತರಿದ್ದರು. ಅರುಣ್ ವಿಟ್ಲ ಸ್ವಾಗತಿಸಿದರು. ಶರತ್ ಕುಮಾರ್ ವಂದಿಸಿದರು. ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು





