.ಮೂಲ್ಕಿ: ಜನಸೇವಕನ ನಕಲಿ ಮುಖವಾಡವನ್ನು ಹೊತ್ತಿರುವ ಕೆಮ್ರಾಲ್ ಗ್ರಾಮ ಪಂಚಾಯತ್ನ ಸದಸ್ಯ ಮಯ್ಯದ್ದಿಯಂತಹ ನೈತಿಕತೆ ಇಲ್ಲದವರ ವಿರುದ್ಧ ಹಿಂದೂ ಸಂಘಟನೆಯು ನಿರಂತರ ಹೋರಾಟ ನಡೆಸಲಿದೆ, ಸಮಾಜ ವಿರೋಧಿ ಪುಂಡಾಟಿಕೆಯನ್ನು ಹಿಂದೂ ಸಮಾಜವು ಸಮರ್ಥವಾಗಿ ಎದುರಿಸಲಿದ್ದು, ಸಮಾಜದಲ್ಲಿ ಕಳಂಕಿತರಾದ ಮಯ್ಯದ್ದಿ ಗ್ರಾಮ ಪಂಚಾಯತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಕರ್ಾರದ ಜಿಲ್ಲೆಯ ಮಂತ್ರಿಗಳು ಅಕ್ರಮ ಚಟುವಟಿಕೆಗೆ ಬೆಂಬಲ ನೀಡುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅಕ್ರಮ ಗೋಸಾಗಾಟ, ಟೋಲ್ಗೇಟ್ ಧ್ವಂಸಕ್ಕೆ ಪ್ರೇರಣೆ, ಹೆಣ್ಣು ಮಕ್ಕಳ ಮಾನಹರಣ, ಅಕ್ರಮವಾಗಿ ಹಣವನ್ನು ಮಾಡುವ ದಂಧೆಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಸಮಾಜವನ್ನು ಒಡೆಯುವ ಕುತಂತ್ರ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.

6mlk4
ಅವರು ಮೂಲ್ಕಿ ಬಳಿ ಪಕ್ಷಿಕೆರೆಯ ಮುಖ್ಯಪೇಟೆಯಲ್ಲಿ ಕೆಮ್ರಾಲ್ ಮಂಡಲ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಅಕ್ರಮ ಗೋಸಾಗಾಟ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಯ್ಯದ್ದಿಯ ಅನೈತಿಕ ಚಟುವಟಿಕೆಯ ವಿರುದ್ಧ ಮಂಗಳವಾರ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಯೋಧನ ಗುಂಡಿಗೆ ಬಲಿಯಾದ ಕಬೀರ್ ಅಮಾಯಕನಲ್ಲ ಬದಲಾಗಿ ಸುಳ್ಳು ಅಪವಾದವನ್ನು ಮಾಡಿ ಜೈಲಿಗೆ ಅಟ್ಟಿರುವ ಎಎನ್ಎಫ್ ಯೋಧ ನವೀನ್ ಅಮಾಯಕನಾಗಿದ್ದು, ಜನರ ತೆರಿಗೆ ಹಣವನ್ನು ಗೋಕಳ್ಳನಿಗೆ ಪರಿಹಾರವಾಗಿ ನೀಡಿದ ಹಣವನ್ನು ಕೂಡಲೆ ಸಕರ್ಾರ ಹಿಂದೆ ಪಡೆಯಬೇಕು, ಮೊಯ್ದಿನ್ ಬಾವ ಎಂತಹ ಕುಟಿಲ ರಾಜಕಾರಣಿ ಎನ್ನುವುದಕ್ಕೆ ಕಬೀರ್ ಪ್ರಕರಣವೇ ಸಾಕ್ಷಿಯಾಗಿದೆ, ರಮಾನಾಥ ರೈ, ಖಾದರ್, ಜನಾರ್ಧನ ಪೂಜಾರಿಯಂತಹ ಮಹಾನ್ ನಾಯಕರು ಕಬೀರ್ನ ಮನೆಗೆ ಹೋಗಿ ಕಣ್ಣೀರು ಸುರಿಸಲು ಸಮಯವಿದೆ ಗಡಿಯಲ್ಲಿ ದೇಶ ರಕ್ಷಣೆಗೆ ಜೀವದಾನ ಮಾಡಿದ ಸೈನಿಕ ಮುಕುಂದ ನಾಯಕ್ನ ಶವ ಸಂಸ್ಕಾರದ ಗೌರವಕ್ಕೆ ಇವರಿಗೆ ಪುರುಸೋತ್ತಿಲ್ಲ ಎಂದು ಛೇಡಿಸಿದರು.
ಬುದ್ದಿಜೀವಿಗಳೆಂಬ ಹಣೆಪಟ್ಟಿ ಹೊಂದಿರುವ ಗಿರೀಶ್ ಕಾನರ್ಾಡ್, ಆಲಿಹಸನ್, ರಾಜಶೇಖರ್, ಅಶೋಕ್, ಸುರೇಶ್ ಭಟ್ನಂತಹ ಡೋಂಗಿಗಳು ಎಸ್ಡಿಪಿಐ, ಡಿವೈಎಫ್ಐನಂತಹ ಸಂಘಟನೆಗಳು ನಕ್ಸಲ್ ವಾದವನ್ನು ಮಂಡಿಸಿರುವುದರಿಂದ ಇಂದು ಸಮಾಜದಲ್ಲಿ ಅಶಾಂತಿ ತುಂಬಿದೆ ಎಂದರು. ಜಾಗರಣ ವೇದಿಕೆಯ ಅಧ್ಯಕ್ಷ ದಿನೇಶ್ ಹರಿಪಾದೆ, ಸಂಚಾಲಕ ಅಮರ್ ಶೆಟ್ಟಿ, ಪ್ರಮುಖರಾದ ಗೋಪಿ ಭಟ್, ಜನಾರ್ಧನ ಕಿಲೆಂಜೂರು, ವಿನೋದ್ ಬೊಳ್ಳೂರು, ಸಚಿನ್ ಶೆಟ್ಟಿ, ರಾಜೇಶ್ ದಾಸ್, ಸುಧಾಕರ ಶೆಟ್ಟಿ ಇನ್ನಿತರರು ಹಾಜರಿದ್ದರು.

ಪ್ರತಿಭಟನಾಕಾರರಿಗೆ ಜೀವಬೆದರಿಕೆ  

ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದ ಪ್ರಮುಖರಿಗೆ ದೂರವಾಣಿ ಮೂಲಕ ವಿದೇಶದಿಂದ ಕರೆ ಬಂದಿದ್ದು ಮಯ್ಯದ್ದಿಯ ವಿರುದ್ಧವಾಗಿ ನಡೆದುಕೊಂಡರೆ ಜಾಗ್ರತೆ ಎಂದು ಬೆದರಿಸಲಾಗಿದೆ ಎಂದು ಸಭೆಯಲ್ಲಿ ಸತ್ಯಜಿತ್ ಬಹಿರಂಗ ಪಡಿಸಿದರು. ಸಭೆಗೆ ಅನುಮತಿಯನ್ನು ನೀಡಬಾರದು ಎಂದು ಸಚಿವ ಅಭಯಚಂದ್ರರ ಮೂಲಕ ಮೂಲಕ ಸ್ಥಳೀಯ ಕಾಂಗ್ರೆಸ್ ನಾಯಕರು ಪೊಲೀಸರಿಗೆ ಒತ್ತಡ ಹಾಕಿದ್ದರು ಎಂದು ಪ್ರತಿಭಟನಾ ಕಾರರು ಆರೋಪಿಸಿದ್ದು ನಿದರ್ಿಷ್ಟ ಸ್ಥಳದಲ್ಲಿ ಸಭೆಯನ್ನು ವಿರೋಧಿಸುವ ಒಂದು ವರ್ಗವೇ ಗುಂಪು ಗೂಡಿತ್ತು. ಪೊಲೀಸರು ಎರಡು ಕ್ಯಾಮಾರಾದಲ್ಲಿ ವಿಡಿಯೋ ಚಿತ್ರೀಕರಣ ನಡೆಸಿದರು. ಬಿಗಿ ಪೊಲೀಸ್ ಬಸ್ತಿಗಾಗಿ ವಿಶೇಷ ಕೆಎಸ್ಆರ್ಪಿಯ ಎರಡು ತುಕಡಿಯನ್ನು ನಿಯೋಜಿಸಿತ್ತಲ್ಲದೇ ಸುರತ್ಕಲ್ ಠಾಣೆಯ ಪೊಲೀಸರೊಂದಿಗೆ ಮೂಲ್ಕಿ ಪೋಲೀಸರು ಗರಿಷ್ಠ ಮಟ್ಟದಲ್ಲಿ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಮೊಕ್ಕಾಂ ಹೂಡಿದ್ದರು.

By suddi9

Leave a Reply

Your email address will not be published. Required fields are marked *