ಮಂಗಳೂರು: ತನ್ನ ಖಾಸಗಿ ಮೊಬೈಲ್ನಿಂದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಮಾಹಿತಿ ಸೋರಿಕೆಗೊಂಡ ಹಿನ್ನೆಲೆಯಲ್ಲಿ ಸಂಸದ ನಳಿ ನ್ ಕುಮಾರ್ ಕಟೀಲ್ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ವಿರುದ್ಧ ಬಂದರ್ ಠಾಣೆಗೆ ದೂರು ನೀಡಿದ್ದಾರೆ.
ತಾನು ಕರೆ ಮಾಡಿದ ಮಾಹಿತಿಯನ್ನು ಸಂಗ್ರಹಿಸಿ ಚುನಾವಣೆಯ ವೇಳೆ ಅಪಪ್ರಚಾರಕ್ಕೆ ಬಳಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷೇತರ ಅಭ್ಯರ್ಥಿ ಸುದತ್ತ್ ಜೈನ್ ಹಾಗೂ ಕ್ರಿಮಿನಲ್ ವಕಿಲರೋರ್ವರ ವಿರುದ್ಧ ಲೋಕಸಭಾ ಚುನಾವಣೆಯ ವೇಳೆ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಲ್ಲಿ ಪಿ.ಪಿ. ಹೆಗ್ಡೆಯ ಹೆಸರು ಅಧಿಕೃತವಾಗಿ ಸೇರಿರಲಿಲ್ಲ. ಆದರೆ ಗುರುವಾರ ಪೊಲೀಸ್ ಕಮೀಷನರ್ಗೆ ನೀಡಿದ ಮನವಿಯಲ್ಲಿ ಹೆಗ್ಡೆ ಹೆಸರನ್ನು ಅಧಿಕೃತವಾಗಿ ನಮೂದಿಸಿ, ಅದರ ಒಂದು ಪ್ರತಿಯನ್ನು ಬಂದರ್ ಠಾಣೆಗೆ ಕೊಟ್ಟಿದ್ದಾರೆ. ಈ ಆಧಾರದಲ್ಲಿ ಪೊಲೀಸರು ಪಿ.ಪಿ. ಹೆಗ್ಡೆ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ಸುದತ್ತ್ ಜೈನ್ ವಕೀಲ ಪಿ.ಪಿ. ಹೆಗ್ಡೆಯೊಂದಿಗೆೆ ಸೇರಿ ತನ್ನ ಮೊಬೈಲ್ ಕರೆಯ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತನ್ನ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ದೂರಲ್ಲಿ ತಿಳಿಸಿದ್ದಾರೆ. ಅಲ್ಲದೆ ಬಾತರ್ಿ ಏರ್ಟೆಲ್ ಕಂಪೆನಿ ತನ್ನ ದೂರವಾಣಿ ಕರೆಯ ಮಾಹಿತಿಯನ್ನು ಇತರ ವ್ಯಕ್ತಿಗಳಿಗೆ ನೀಡಿದ್ದು ಹೇಗೆ ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಈ ನೋಟಿಸ್ಗೆ ಎರಡು ವಾರ ಕಳೆಯುತ್ತಿದ್ದರೂ ಕಂಪನಿ ಯಾವುದೇ ರೀತಿಯಲ್ಲಿ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ


