ಬಂಟ್ವಾಳ ತಾಲ್ಲೂಕಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ಬಿನ ವತಿಯಿಂದ ಮೆಲ್ಕಾರ್ನಲ್ಲಿ ಈಚೆಗೆ ನಡೆದ ‘ಅಮ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಸೇವೆಗಾಗಿ ಮಂಗಳೂರು ಸೇವಾ ಭಾರತಿ ಸಂಸ್ಥೆ ಟ್ರಸ್ಟಿ ಪಿ.ವಿನೋದ್ ಶೆಣೈ ಇವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬಿ.ಎಂ.ದಾಮೋದರ, ಅವಿಭಜಿತ ಜಿಲ್ಲೆ ಕೌನ್ಸಿಲ್ ಚೇರ್ಪರ್ಸನ್ ಪಿ.ಎನ್.ಸತ್ಯಪ್ರಕಾಶ್ ಉಪಾಧ್ಯ, ಸಮಿತಿ ಅಧ್ಯಕ್ಷ ಡಾ.ಬಿ.ವಸಂತ ಬಾಳಿಗಾ, ಲಯನ್ಸ್ ಅಧ್ಯಕ್ಷ ಜಯಂತ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಗೀತಾ ಜೆ.ಶೆಟ್ಟಿ, ಪ್ರಮುಖರಾದ ಜಗದೀಶ ಎಡಪಡಿತ್ತಾಯ, ಶ್ರೀನಿವಾಸ ಪೂಜಾರಿ, ಸುಧಾಕರ ಆಚಾರ್ಯ, ಜ್ಯೋತಿ ಮಧ್ವರಾಜ್ ಕಲ್ಮಾಡಿ, ಚಿತ್ರಾ ಜೆ.ಎಡಪಡಿತ್ತಾಯ ಮತ್ತಿತರರು ಇದ್ದರು.
