ಬಂಟ್ವಾಳ; ಸೋಮವಾರ ರಾತ್ರಿ ಸುರಿದ  ಗಾಳಿಮಳೆಗೆಕಾವಳಮೂಡೂರು ಗ್ರಾಮದ ಪಂಜಾಡಿ ಎಂಬಲ್ಲಿ ಥೋಮು ಠೋಮಸ್ ಎಂಬವರಿಗೆ ಸೇರಿದ ತೋಟದ ಬಾಳೆಗಿಡ ಹಾಗೂ ಅಡಿಕೆ ಗಿಡಗಳು ನೆಲಕ್ಕಯರುಳಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಸುಮಾರು 7 ಎಕ್ರೆ ಜಮೀನಿನಲ್ಲಿ ನೆಡಲಾದ ಸುಮಾರು 8000 ಫಲಭರಿತವಾದ ಬಾಳೆಗಿಡ ಹಾಗೂ ಸುಮಾರು 50 ಅಡಿಕೆ ಗಿಡಗಳು ಗಾಳಿಗೆ ನೆಲಕ್ಕುರುಳಿ ನಷ್ಟ ಉಂಟಾಗಿದೆ, ಸಾಲ ಮಾಡಿ ಇವರು ಕೃಷಿ ಆರಂಭಿಸಿದ್ದು, ಇದೀಗ ಗಾಳಿಯ ರಭಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ, ಕಮದಾಯ ಅಧಿಕಾರಿಗಳು ಹಾಗೂ ಪಂಚಾಯತ್ ನ ಗ್ರಾಮಕರಣಿಕರಿಗೂ ಥೋಮಸ್ ಅವರು ಮಾಹಿತಿ ನೀಡಿದ್ದು, ನಷ್ಟದ ಅಂದಾಜಿ ಇನ್ನಷ್ಟೇ ಲಭ್ಯವಾಗಬೇಕಿದೆ. ಹಾಗೆಯೇ ಇದೇ ಪರಿಸರದ ಐಸಮ್ಮ ಎಂಬವರ ಮನೆಯ ಹಂಚು ಗಾಳೀಯ ರಭಸಕ್ಕೆ ಹಾರಿಹೋಗಿದ್ದರೆ, ಪೂಂಜಾಲಕಟ್ಟೆ ಪರಿಸರದ ಅಲ್ಲಲ್ಲಿ ಮರದ ಗೆಲ್ಲುಗಳು ಬಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ, ಇದರ ದುರಸ್ತಿ ಕಾರ್ಯ ಮಂಗಳವಾರ ನಡೆದಿದೆ. ಮಂಗಳವಾರ ಸಂಜೆಯೂ ಬಾನಂಗಳದಲ್ಲಿ ಕರಿಮೋಡ ಆವರಿಸಿದ್ದು, ಸಂಜೆ ಯ ಮೇಳೆಗೆ ಅಲ್ಪ ಪ್ರಮಾಣದ ಗುಡುಗು ಹಾಗೂ ಮಿಂಚಿನ ಜೊತೆಗೆ ಹನಿಹನಿ ವರ್ಷಧಾರೆ ಆರಂಭಗೊಂಡಿದೆ.

male hani kavala moodooru-1

male hani kavala moodooru-2ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿರುವ ಸಿಡಿಲು ಸಹಿತ ಗಾಳಿಮಳೆಯಿಂದಾಗಿ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 31 ಮನೆಗಳಿಗೆ ಹಾನಿಯಾಗಿದ್ದು ಸುಮಾರು 6.80 ಲಕ್ಷ ರೂ ನಷ್ಟ ಸಂಭವಿಸಿದೆ.
ವಿಟ್ಲ ಹೋಬಳಿಯಲ್ಲಿ 17 ಮನೆ, ಬಂಟ್ವಾಳ ಹೋಬಳಿಯಲ್ಲಿ 4 ಮನೆ ಹಾಗೂ ಪಾಣೆಮಂಗಳೂರು ಹೋಬಳಿಯಲ್ಲಿ 10 ಮನೆಗಳಿಗೆ ಹಾನಿಯುಂಟಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಲ್ಲೇಸ್ವಾಮಿ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *