ಬಂಟ್ವಾಳ : ಮಾನನಷ್ಟ ಮೊಕದ್ದಮೆಯೊಂದರಲ್ಲಿ ಬಂಟ್ವಾಳ ಹೆಚ್ಚುವರಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಮಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ ಪಟ್ಟಾಂಗ ಪಾಕ್ಷಿಕ ಪತ್ರಿಕೆಯ ವರದಿಗಾರ ಮತ್ತು ಪಬ್ಲಿಶರ್ ಆಗಿದ್ದ ಅಂಡೋಪೌಲ್ ಅವರಿಗೆ ಒಂದು ವರ್ಷ ಜೈಲು ಮತ್ತು ರೂ.10,000 ದಂಡ ತಪ್ಪಿದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಟ್ಟಾಂಗ ಪತ್ರಿಕೆಯಲ್ಲಿ ಆರೋಪಿಯು ಪಿರ್ಯಾದುದಾರ್ತಿಯಾದ ನಿವೃತ್ತ ಶಿಕ್ಷಕಿ ಗ್ಲಾಡಿಯಸ್ ಪಾಯಸ್ ಇವರ ಫೋಟೋ ಹಾಕಿ ತಮ್ಮನ ಸಾವಿಗೆ ಕೈಜೋಡಿಸಿದವರು ಎಂಬ ಶಿರೋನಾಮೆಯಡಿಯಲ್ಲಿ ಅವಹೇಳಕಾರಿಯಾಗಿ ಮಾನಕ್ಕೆ ಕುಂದುಂಟಾಗುವಂತಹ ಬರಹ ಪ್ರಕಟಿಸಿದ್ದರು. ಈ ಬಗ್ಗೆ ಪಿಯದುದಾರ್ತಿ ಯು ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿತನ ವಿರುದ್ಧ ಐ.ಪಿ.ಸಿ.ಕಲಂ.500ರರಡಿಯಲ್ಲಿ ಖಾಸಗಿ ಪಿರ್ಯಾದಿ ದಾಖಲಿಸಿದ್ದು ಈ ಪ್ರಕರಣದಲ್ಲಿ ಈಗ ತನಿಖೆ ನಡೆದು ಆರೋಪಿಯ ಅಪರಾಧ ಸಾಬೀತಾಗಿದ್ದು ನ್ಯಾಯಾಲಯ ಮೇಲಿನಂತೆ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಪಿರ್ಯಾದುದಾರ್ತಿಯಾದ ಗ್ಲಾಡಿಯಸ್ ಪಾಯಸ್ ಇವರ ಪರವಾಗಿ ಬಿ.ಸಿ.ರೋಡ್ ನ ನ್ಯಾಯವಾದಿಗಳಾದ ಕೆ.ರಮೇಶ ಉಪಾಧ್ಯಾಯ ಮತ್ತು ಪ್ರಶಾಂತ ಮುಳಿಯ ಇವರುಗಳು ವಾದಿಸಿದ್ದರು.
KAR_2871

By suddi9

Leave a Reply

Your email address will not be published. Required fields are marked *