ಬಂಟ್ವಾಳ : ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜಿಪಮೂಡದಲ್ಲಿ ವರ್ಷಾವದಿ ಕೋಲ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದಿರುವ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಾನ್ಸಿಂಗ್ ಸ್ಟಾರ್ ಜೂನಿಯರ್ ಎಂಬ ನೃತ್ಯ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೆ ಬಂದಿರುವ ಪೂರ್ವಿ ಕೆ ರಾವ್ ರವರನ್ನು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಸುದರ್ಶನ್ ಜೈನ್ ಸನ್ಮಾನಿಸಿದರು. ಮೌಂಟ್ ಕಾರ್ಮೆಲ್ ನ 5ನೇ ತರಗತಿಲ್ಲಿರುವ ಈಕೆ ಯೋಗದಲ್ಲಿ ಮಾಡಿರುವ ಸಾಧನೆಗಾಗಿ ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ “ ಯೋಗಕಲಾ ಚೇತನಾ ಪ್ರಶಸ್ತಿ” , ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನವಿಲುಗರಿ ಸಾಂಸ್ಕ್ರತಿಕ ವೇದಿಕೆಯಿಂದ “ ನವಿಲುಗರಿ ಪ್ರಶಸ್ತಿ”ಯನ್ನು ಪಡೆದಿರುತ್ತಾಳೆ.
ಈ ಸಂದರ್ಭದಲ್ಲಿ ಭೂ ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ , ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್ ಕೋಮಾಲಿ , ಪಣೋಲಿಬೈಲು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ , ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ , ಪರಮೇಶ್ವರ ಎಂ., ಮಧುಸೂದನ್ ಶೆಣೈ, ನವೀನ್ ಕುಲಾಲ್, ರಮೇಶ್ ಕುಲಾಲ್, ಯೋಗೀಶ್ ಪೂಜಾರಿ , ನಾಗೇಶ್ ಕುಲಾಲ್, ವಿಶ್ವನಾಥ ಬೆಳ್ಚಡ, ದಯಾನಂದ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಯೋಗೀಶ್ ಪೂಜಾರಿ ಕೋಮಾಲಿಬೈಲು ಮತ್ತು ಬಾಲಕಿಯ ಪೋಷಕರು ಉಪಸ್ಥಿತರಿದ್ದರು.
