ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂಪಣಮಜಲು ರಸ್ತೆ ಕಾಂಕ್ರೀಟಿಕರಣಕ್ಕೆ ಆರೋಗ್ಯ ಮತ್ತು ಕುಟುಂಬಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳೀಯರ ಬೇಡಿಕೆಯ ಮೇರೆಗೆ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಯನ್ನು ಹಾನಿಗೊಳಿಸದೆ ಉತ್ತಮವಾಗಿ ಕಾಪಾಡುವ ಜವಬ್ದಾರಿಯೂ ಗ್ರಾಮಸ್ಥರಿಗೆ ಸೇರಿದ್ದಾಗಿದೆ ಎಂದರು.

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾಮಪಂಚಯಿತಿ ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್, ಮಾಜಿ ಅಧ್ಯಕ್ಷ ಅಖ್ತರ್ ಹುಸೇನ್, ಸದಸ್ಯರಾದ ಖಾದರ್ ಪಾವೂರು, ಯೂಸುಫ್ ಅಲಂಕಾರ್, ಜಾಹೀರ್, ಫೈಝಲ್, ಲತೀಫ್, ರಮ್ಲಾನ್, ಹೇಮಲತಾ ವನಿತಾ, ಜಿ.ಪಂ.ಕಿರಿಯ ಇಂಜಿನಿಯರ್ ರವಿಚಂದ್ರ, ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಕುಂಪಣಮಜಲು ಹಾಜರಿದ್ದರು.
