ಮೂಡುಬಿದರೆ: ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ನೆಲಜಲದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ಸಲದ ಆಳ್ವಾಸ್ ನುಡಿಸಿರಿಯಲ್ಲಿ ನ.26ರಿಂದ 29ರವರೆಗೆ ಕೃಷಿಸಿರಿ ನಡೆಯಲಿದೆ ಎಂದು ಮೂಡುಬಿದರೆ ಕೃಷಿ ವಿಚಾರ ವಿನಿಮಯ ಕೇಂದ್ರ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ನುಡಿಸಿರಿಯ ಸಂದರ್ಭ ಮುಖ್ಯ ವೇದಿಕೆಯ ಸಮೀಪದಲ್ಲೇ ಕೃಷಿಸಿರಿ ನಡೆಯಲಿದೆ. ಸುಮಾರು 150ಕ್ಕೂ ಅಧಿಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಮಳಿಗೆಗಳ ಸಂರ್ಕೀಣಕ್ಕೆ ಕೃಷಿ ಋಷಿ ದಿ.ಜೀವಂಧರ ಕುಮಾರ್ ಅವರ ಹೆಸರನ್ನು ಇರಿಸಲಾಗಿದೆ. ಇದು ಕೇವಲ ಕೃಷಿ ವಿಚಾರಕ್ಕೆ ಸೀಮಿತವಾಗದ ಈ ಮಳಿಗೆಗಳನ್ನು ಕೃಷಿಕರು ಹಾಗೂ ವಿವಿಧ ನರ್ಸರಿ ಕೃಷಿಗೆ ಸಂಬಂಧ ಉಪಕರಣ, ಮಾರಾಟಗಳಿಗೂ ಮುಕ್ತ ಅವಕಾಶವಿದೆ. ಮಳಿಗೆ, ವಸತಿ ಹಾಗೂ ಊಟದ ವ್ಯವಸ್ಥೆಯನ್ನೂ ಉಚಿತವಾಗಿ ಕಲ್ಪಿಸಲಾಗುತ್ತದೆ ಎಂದರು.
ಕೃಷಿ ಸಿರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದ.ಕ ಜಿಲ್ಲಾ ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದರೆ ಹಾಗೂ ಮೂಡುಬಿದರೆ ವಲಯ ರೈತ ಸಂಘ ಸಹಕಾರ ನೀಡಲಿದೆ ಎಂದರು.
ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಪ್ರಗತಿಪರ ರಘುರಾಮ್ ಶೆಟ್ಟಿ ಹಾಗೂ ಯತಿರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
