ಮೂಡುಬಿದರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಏಳು ಮಂದಿಯನ್ನು ಪೆಮರ್ುದೆಯಲ್ಲಿ ನಡೆದ ಬೇಕರಿ ವ್ಯಾಪಾರಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎರಡನೇ ಜೆಎಂಎಫ್ಸಿ ಕೋರ್ಟ್ ಎಂಟು ದಿನ ಬಜ್ಪೆ ಪೊಲೀಸ್ ವಶಕ್ಕೆ ನೀಡಿದೆ.
ಪ್ರಶಾಂತ್ ಕೊಲೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಬಂಧಿಸಿದ್ದ 10 ಆರೋಪಿಗಳ ಪೈಕಿ ಮಹಮ್ಮದ್ ಹನೀಫ್ ಅದ್ಯಪಾಡಿ, ಮಹಮ್ಮದ್ ಮುಸ್ತಾಫ ಬಜ್ಪೆ, ಮಹಮ್ಮದ್ ಮುಸ್ತಾಫ ಕಾವೂರು, ಕಬೀರ್ ಕಂದಾವರ, ಮಹಮ್ಮದ್ ಶರೀಫ್ ತೋಡಾರು, ಲಿಯಾಕತ್ ಮತ್ತು ಬದ್ರುದುದ್ದೀನ್ ಗಂಟಾಲ್ಕಟ್ಟೆ ಅವರನ್ನು ವಿಚಾರಣೆಗೊಳಪಡಿಸಿದಾಗ ಕಿನ್ನಿಗೊಳಿ ಏಳಿಂಜೆಯ ಬೇಕರಿ ವ್ಯಾಪಾರಿ ಜಯ ಕೋಟ್ಯಾನ್ ಅವರ ಕೊಲೆಯತ್ನದಲ್ಲಿ ಭಾಗಿಯಾಗಿರುವುದನ್ನು ಬಾಯಿಬಿಟ್ಟಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ರಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಬಜಪೆ ಪೊಲೀಸರು ಕೋರ್ಟ್ ಗೆ ಸೋಮವಾರ ಮನವಿ ಮಾಡಿದ್ದರು. ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿ ಏಳು ಆರೋಪಿಗಳನ್ನು ನವೆಂಬರ್ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

By suddi9

Leave a Reply

Your email address will not be published. Required fields are marked *