ಕೈಕಂಬ: ದುಷ್ಕರ್ಮಿಗಳಿಂದ ಹತ್ಯೆಗೀಡಾದ್ದ ಪ್ರಶಾಂತ್ ಮನೆಗೆ ಭೇಟಿ ನೀಡಿದ ಬಡಗ ಎಡಪದವಿನ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರು ಪ್ರಶಾಂತ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
*ಮೃತ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಿ ಸಾಂತ್ವನ ಹೇಳಬೇಕಾಗಿದ್ದ ಸಚಿವ ಅಭಯಚಂದ್ರ ಜೈನ್ ಅವರು ಕನಿಷ್ಠ ಸೌಜನ್ಯವನ್ನು ತೋರಿದೆ ಮೃತ ಪ್ರಶಾಂತ್ ಕುರಿತಾಗಿಯೇ ಆತ ಓರ್ವ ಕ್ರಿಮಿನಲ್ ಎಂದು ಅಧಾರ ರಹಿತವಾಗಿ ಅಮಾನವೀಯ ಹೇಳಿಕೆ ನೀಡಿರುವುದು ವಿಶಾದನೀಯ.* ಎಂದು ವಿಜಯನಾಥ್ ಶೆಟ್ಟಿ ಅವರು ಸುದ್ದಿಗಾರರಿಗೆ ತಿಳಿಸಿದರು.

7vm Vijaynath3
*ಸ್ವತಃ ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ ಪ್ರಶಾಂತ್ ಮೇಲಿರುವುದು ಎರಡು ಪಿಟ್ಟಿ ಕೇಸ್ ಮಾತ್ರ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಸಚಿವ ಅಭಯಚಂದ್ರ ಅವರು ಸಾಧ್ಯವಾದರೆ ತನ್ನ ಹೇಳಿಕೆಯನ್ನು ಸಾಬೀತುಪಡಿಸಲಿ ಸರಕಾರದ ಪ್ರತಿನಿಧಿಗಳು ಕಬೀರ್  ಗೆ ಸರಕಾರದ ಮೇಲೆ ಒತ್ತಡ ತಂದು 10ಲಕ್ಷ ರೂ. ಪರಿಹಾರ ಕೊಡಿಸುವುದಾದರೆ ಪ್ರಶಾಂತ್ ಕುಟುಂಬಕ್ಕೆ  ಯಾಕೆ ಕೊಡಿಸಬಾರದು ಸಚಿವರು ಸ್ವಜನ ಪಕ್ಷಪಾತ ಮತ್ತು ತಾರತಮ್ಯದ ನಿಲುವು ತಳೆದಿರುವುದು ಸರಿಯಲ್ಲ* ಎಂದು ಅವರು ಹೇಳಿದರು.
ಶಾಸ್ತಾವು ಫ್ರೆಂಡ್ಸ್ ಸದಸ್ಯರು ಹಾಗೂ ಬಿಜೆಪಿ ಮುಂಖಂಡ ಜಗದೀಶ್ ಅಧಿಕಾರಿ ಅವರು ಜತೆಗಿದ್ದರು.

By suddi9

Leave a Reply

Your email address will not be published. Required fields are marked *