ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ, ಶ್ರೀ ವಟಪುರ ಕ್ಷೇತ್ರ ಬಂಟ್ವಾಳ ದಲ್ಲಿ ನ.15 ನೇ ರವಿವಾರ ಪ್ರಾತಃಕಾಲ ಗಂಟೆ 4.00ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಅನೇಕ ವಿಧಿ ವಿಧಾನ ಪೂರ್ವಕ 14ನೇ ವರ್ಷದ ಶ್ರೀ ದೇವರ “ ವಿಶ್ವ ರೂಪ ದರ್ಶನ “ ಜರಗಲಿದೆ. ಪ್ರಾಥಕಾಲ ಗಂಟೆ 4.30ರಿಂದ 7.00ರವರೆಗೆ ಶ್ರೀ ರಾಜೇಶ್ ಪಡಿಯಾರ ಮೈಸೂರು ಹಾಗೂ ಶ್ರೀ ರಾಮಾಂಜನೇಯ ಬಾಲ ಭಜನಾ ಮಂಡಳಿ ಬಂಟ್ವಾಳ ಇವರಿಂದ ಭಜನಾ ಕಾರ್ಯಕ್ರಮ . ಪ್ರಾಥಕಾಲ 5.00ಗಂಟೆಗೆ ಕಾಕಡಾರತಿ , ಜಾಗರಪೂಜೆ, ನಂತರ ಸಮಸ್ತ ಭಜಕವೃಂದದವರಿಗೆ ವಿಶೇಷಾಲಂಕೃತ ಶ್ರೀ ದೇವರ ವಿಶ್ವರೂಪ ದರುಶನದ ಭಾಗ್ಯ , ಪ್ರಸಾದ ವಿತರಣೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *