ಬಂಟ್ವಾಳ:ತಾಲ್ಲೂಕಿನ ಕುರಿಯಾಳ ಗ್ರಾಮದ ಆನೆಕೆರೆ ನಿವಾಸಿ ಕೂಲಿ ಕಾರ್ಮಿಕ ಆನಂದ ಪೂಜಾರಿ (40) ಎಂಬವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಸಾಲ ಮಾಡಿ ಹೊಸ ಮನೆ ಕಟ್ಟಿಕೊಂಡಿದ್ದ ಆನಂದ ಅವರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
