ಮೂಡುಬಿದರೆ: ಮಂಗಳೂರು ಸಬ್ಜೈಲಿನಲ್ಲಿ ಹತ್ಯೆಗೀಡಾದ ಮಾಡೂರು ಯೂಸೂಫ್ ಮತ್ತು ಗಣೇಶ್ ಶೆಟ್ಟಿ ಅವರ ಶವವಿರಿಸಿದ್ದ ವೆನ್ಲಾಕ್ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳಿದ್ದ ಮಂಗಳೂರಿನ ನಾಲ್ವರು ಪತ್ರಕರ್ತರಿಗೆ ಹಲ್ಲೆ ನಡೆಸಿದ ಕೃತ್ಯವನ್ನು ಮೂಡುಬಿದರೆ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿ ಬುಧವಾರ ಸಂಜೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.

ಹಲ್ಲೆ ನಡೆಸಿದ ಆರೋಪಿಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೋಳಬೇಕು ಹಾಗೂ ಪತ್ರಕರ್ತರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ರಕ್ಷಣೆ ನೀಡಬೇಕೆಂದು ತಹಸೀಲ್ದಾರ್ ಮುಹಮ್ಮದ್ ಇಸಾಕ್ ಮೂಲಕ ದ.ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಸೀತಾರಾಮ ಆಚಾರ್ಯ, ಕಾರ್ಯದರ್ಶೀ ಪ್ರಸನ್ನ ಹೆಗ್ಡೆ ಸದಸ್ಯರಾದ ಧನಂಜಯ ಮೂಡುಬಿದರೆ, ಯಶೋಧರ ವಿ.ಬಂಗೇರ, ರಾಘವೇಂದ್ರ ಶೆಟ್ಟಿ, ಶರತ್ ದೇವಾಡಿಗ, ಪದ್ಮಶ್ರೀ ಭಟ್ ಹಾಜರಿದ್ದರು.
