ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ , ಎ.ಬಿ.ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಸಯನ್ಸ್ ದೇರಳಕಟ್ಟೆ , ದ.ಕ.ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಇದರ ಸಹಯೋಗದೊಂದಿಗೆ ಪ್ರತಿ ಮಂಗಳವಾರ ಹೋಟೇಲ್ ರಂಗೋಲಿಯಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನೇತ್ರ ತಜ್ಞೆ ವಸಂತಿ ಬಿ ಕೋಟ್ಯಾನ್ , ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ, ಉಮಾ ಚಂದ್ರಶೇಖರ್, ಪ್ರಶಾಂತ್ ಕುಮಾರ್ ತುಂಬೆ, ಹರಿಣಿ ಕರುಣಾಕರ, ಯಮುನಾ, ಸಾರಾ ಮೊಹಿದ್ದೀನ್, ನಾರಾಯಣ ಬೆಳ್ಚಾಡ , ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.

