ಮೂಡುಬಿದರೆ: ಕಳೆದ ಆರು ವರ್ಷಗಳಲ್ಲಿ 11 ಕೃತಿಗಳನ್ನು ರಚಿಸಿ 36 ಸಾವಿರ ಪ್ರತಿಗಳನ್ನು ಸ್ವತಃ ಮಾರಾಟಮಾಡಿ ಪುಚ್ಚಮೊಗರಿನ ಕೃಷಿಕ ಸಾಹಿತಿ ಉಗ್ಗಪ್ಪಪೂಜಾರಿಯವರು ತುಳು ಸಾಹಿತ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರ ಸಾಹಿತ್ಯ ಅಕಾಡೆಮಿಕ್ ಸಾಹಿತ್ಯವಲಯಕ್ಕೆ ಸೀಮಿತವಾಗದೇ ಜನಸಾಮಾನ್ಯರಿಗೂ ತಲುಪಿ ಲಾಭ ನೀಡಿದೆ. ಭಾಷೆ ಅಳಿಯುತ್ತರಯವ ಈ ಕಾಲ ಘಟ್ಟದಲ್ಲಿ ಭಾಷಾ ಪ್ರೀತಿ ಹುಟ್ಟಿಸುವ ಈ ತುಳು ಸಾಹಿತ್ಯ ಸೇವೆ ಗಮನಾರ್ಹವಾದದ್ದು ಲೇಖಕ, ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಹೇಳಿದರು.

mbd_nov1_4ಅವರು ಉಗ್ಗಪ್ಪ ಪೂಜಾರಿಯವರ 11ನೇ ನೂತನ ತುಳು ಕೃತಿ ‘ತುಲು ಸಬ್ದಾರ್ತೊ ‘ವನ್ನು ಶನಿವಾರ ಸಂಜೆ ಮೂಡುಬಿದಿರೆ ಪ್ರೆಸ್ ಕ್ಲಬ್ನಲ್ಲಿ ಲೊಕಾರ್ಪಣೆಗೊಳಿಸಿ ಮಾತನಾಡಿದರು.
ತುಳು ಅಕಾಡೆಮಿ ಮಾಜಿ ಸದಸ್ಯೆ, ಉಡಲ್ ಪತ್ರಿಕೆಯ ಸಂಪಾದಕಿ ಜಯಂತಿ ಎಸ್. ಬಂಗೇರ ಅತಿಥಿಯಾಗಿ ಮಾತನಾಡಿ ವಿಶ್ವ ತುಳು ಸಮ್ಮೇಳನದ ಮೂಲಕ ಸ್ಫೂರ್ತಿ  ಪಡೆದ ಉಗ್ಗಪ್ಪ ಪೂಜಾರಿಯವರು ತುಳು ಕಲಿಕೆಗೆ ಪೂರಕ ಸಾಹಿತ್ಯ ಸೇವೆ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಧನಂಜಯ ಮೂಡುಬಿದರೆ ಕಾರ್ಯಕ್ರಮ ನಿರ್ವಹಿಸಿ ಪ್ರೆಸ್ ಕ್ಲಬ್ ಕಾರ್ಯದರ್ಶಿ  ಪ್ರಸನ್ನ ಹೆಗ್ಡೆ ವಂದಿಸಿದರು.

By Suddi9

Leave a Reply

Your email address will not be published. Required fields are marked *