ಕನ್ಯಾಡಿ: ಶ್ರೀ ರಾಮ ಕಾರುಣ್ಯ ಕಲಾ ಸಂಘ ನಿತ್ಯನಂದ ನಗರ ಧರ್ಮಸ್ಥಳ ದ್ವಿತೀಯ ವರ್ಷದ ಯಕ್ಷ ಕಲೋತ್ಸವ ನ.10ರಂದು ಮಂಗಳವಾರ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ನಡೆಯಲಿದೆ.

000

ಅಂದು ಸಂಜೆ 5-00ಕ್ಕೆ ಸರಿಯಾಗಿ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ಶ್ರೀ ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರ ಸಂಸ್ಮರಣೆ ಕೇದೆ ಸುಬ್ಬ ಪೂಜಾರಿ ವೇದಿಕೆ ಮತ್ತು ಮಿತ್ತಮಾರ್ ಬಿರ್ಮಣ ಪೂಜಾರಿ ಸಭಾಂಗಣ ಹಾಗೂ ಹೇರಾಜೆ ನೀಲಮ್ಮ ವೆಂಕಪ್ಪ ಪೂಜಾರಿ ಪ್ರಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮಗಳು ಸಂಜೆ 5-00ಕ್ಕೆ ಸರಿಯಾಗಿ ‘ಚೌಕಿ ಪೂಜೆ; ಸಂಜೆ 5-00 ರಿಂದ 8-00 ವರೆಗೆ ಯಕ್ಷಗನ ತಾಳಮದ್ದಳೆ ‘ಸತ್ವ ಪರೀಕ್ಷೆ” ನಡೆಯಲಿದೆ. ರಾತ್ರಿ 8ರಿಂದ 10ರವರೆಗೆ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 10 ರಿಂದ ಯಕ್ಷಗಾನ ಬಯಲಾಟ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ “ಶ್ರೀ ಕೃಷ್ಣ ಲೀಲಾಮೃತ” “ಮಲೆತ ಬೊಲ್ಪು” ಎಂಬ ತುಳು ನಾಟಕ ನಡೆಯಲಿದೆ.

By suddi9

Leave a Reply

Your email address will not be published. Required fields are marked *