ಬಂಟ್ವಾಳ: ಬಂಟವಾಳಿಗರ ನಡೆ ನೇತ್ರಾವತಿ ಕಡೆ ಎಂಬ ವಿಶಿಷ್ಟ ಆಂದೋಲನಕ್ಕೆ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗ ಹರಿಯುತ್ತಿರುವ ನೇತ್ರಾವತಿ ನದಿಗೆ ಗಂಗಾ ಪೂಜನ ಹಾಗೂ ಬಾಗಿನ ಅರ್ಪಣೆ ಮೂಲಕ  ಶುಕ್ರವಾರ ರಾತ್ರಿ ಚಾಲನೆ ದೊರೆತಿದೆ.
ಪುರೋಹಿತರಾದ ಬಾಬಾಚಾರ್ಯ , ಮುರಳೀಧರ ಭಟ್ ಮತ್ತು ಪ್ರತಾಪ್ ಭಟ್ ಅವರ ನೇತೃಥ್ವದಲ್ಲಿ ನೇತ್ರಾವತಿ ನದಿತೀರದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದು , ಉದ್ಯಮಿ ಲಕ್ಷ್ಮಣ್ ಬಾಳಿಗಾ ದಂಪತಿಗಳು ನೇತ್ರಾವತಿ ನದಿ ನೀರಿಗೆ ಬಾಗಿನ ಅಪರ್ಿಸಿದರು. ಬಳಿಕ ನದಿ ನೀರನ್ನು ಮೆರವಣಿಗೆಯಲ್ಲಿ ಸಭಾಕಾರ್ಯಕ್ರಮದ ವೇದಿಕೆಗೆ ತರಲಾಯಿತು.

4 (2)

5 (2)

2 (2)

3 (2)
ತದನಂತರ ಎತ್ತಿನಹೊಳೆ ಯೋಜನೆ ಏನು? ಎತ್ತ? ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಗಾರವನ್ನು ಪರಿಸರ ಹೋರಾಟಗಾರರಾದ ಗಿರಿಧರ ಕಾಮತ್, ದಿನೇಶ್ ಹೊಳ್ಳ ಅವರು ನಡೆಸಿಕೊಟ್ಟರು.
ದಿನೇಶ್ ಹೊಳ್ಳ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಶಾಶ್ವತವಾಗಿ ಬರಡು ಮಾಡುವ ಯೋಜನೆ ಇದಾಗಿದ್ದು, ಜಿಲ್ಲೆಯ ಜನತೆ ತಾಯಿ ನೇತ್ರಾವತಿಯ ರಕ್ಷಣೆಗೆ ಕಟಿಬದ್ದರಾಗಬೇಕೆಂದರು. ರಾಜಕೀಯ ವ್ಯವಸ್ಥೆ ಈ ಯೋಜನೆಯನ್ನು ಓಟು ಮತ್ತು ನೋಟಿಗಾಗಿ ಮಾಡುತಿದ್ದು, ಇದರ ಒಳಸಂಚನ್ನು ಅರಿಯುವ ಕಾರ್ಯ ಆಗಬೇಕಿದೆ ಎಂದರು.
ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಆಡಳಿತ ಮಂಡಳಿ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಮಂಡಳಿ, ಸೀತಾರಾಮ ದೇವಸ್ಥಾನದ ಆಡಳಿತ ಮಂಡಳಿ, ಲೊರೆಟ್ಟೋ ಮಾತಾ ದೇವಾಲಯದ ಧರ್ಮಗುರುಗಳು ಮತ್ತು ಆಡಳಿತ ಮಂಡಳಿ, ಕೆಳಗಿನ ಪೇಟೆ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿ, ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಆಡಳಿತ ಮಂಡಳಿ, ಬಡ್ಡಕಟ್ಟೆ ನಿತ್ಯಾನಂದ ಭಜನಾಮಂದಿರದ ಆಡಳಿತ ಮಂಡಳಿ, ವರ್ತಕರ ಸಂಘ ಬಂಟ್ವಾಳ, ಬಂಟ್ವಾಳ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಸಾಥ್ ಒದಗಿಸಿತ್ತು.
ಪರಿಸರ ಹೋರಾಟಗಾರ ರಾಜಮಣಿ ರಾಮಕುಂಜ , ಖತೀಬರಾದ ಅನ್ಸಾರ್ ಫೈಝಿ, ಪ್ರಮುಖರಾದ ಮಾಣೂರು ಲಕ್ಷ್ಮಣ್ ಕಾಮತ್, ರಮೇಶಾನಂದ ಸೋಮಯಾಜಿ, ಯೋಗಿಶ್ ಸಫಲ್ಯ, ಪ್ರಕಾಶ ಕಾರಂತ, ಡಾ.ವಸಂತ ಬಾಳಿಗಾ, ಪುರುಷೋತ್ತಮ ಶೆಣೈ, ಅಜಯ ಕೊಂಬ್ರಬೈಲು, ಗಣೇಶ ಸುವರ್ಣ, ಬಿ.ಲಕ್ಷ್ಮಣ ಅಚ್ಯುತ್ ಬಾಳಿಗಾ , ಸುರೇಶ್ ಬಾಳಿಗಾ ಮೊದಲಾದವರು ಉಪಸ್ಥಿತರಿದ್ದರು.
ಯಶವಂತ ವ್ಯಾಯಾಮ ಶಾಲೆಯ ಅಧ್ಯಕ್ಷ ನಾರಾಯಣ ಕಾಮತ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *