ಬಂಟ್ವಾಳ: ಯುವಜನತೆ ಜೀವನದಲ್ಲಿ ಹಿಂಜರಿಕೆ ಮತ್ತು ಕೀಳರಿಮೆ ತೊರೆದು ಸಾಧನಾ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಆತ್ಮವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಉದ್ಯೋಗ ಮತ್ತು ಬದುಕಿಗೆ ಅಗತ್ಯವಾಗಿಉವ ಕೌಶಲ್ಯವೂ ವರದ್ಧಿಯಾಗುತ್ತದೆ ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಹೇಳಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವಕೇಂದ್ರ ಮತ್ತು ವಿವೇಕಾನಂದ ಯುವಕ ಮಂಡಲ ವತಿಯಿಂದ ಈಚೆಗೆ ನಡೆದ ‘ವಿಷಯಾಧಾರಿತ ಶಿಕ್ಷಣ ಜಾಗೃತಿ ಶಿಬಿರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹತ್ಮಾಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಬದುಕು ನಮಗೆ ಆದರ್ಶವಾಗಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ, ರಂಗತಜ್ಞ ಡಾ.ಆರ್.ನರಸಿಂಹಮೂರ್ತಿ ರಂಗಭೂಮಿ ಮತ್ತು ನಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಸಂಯೋಜಕ ಕೀರ್ತಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ವೇದಶ್ರಿ ನಿಡ್ಯ ಸ್ವಾಗತಿಸಿ, ಶಿಕ್ಷಕ ಬಿ.ರಾಮಚಂದ್ರರಾವ್ ವಂದಿಸಿದರು.
