ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನಾಲ್ಕನೇ ತರಗತಿಯಲ್ಲಿ ಓದುವ ಬಾಲಕ ಯಜ್ಙೇಶ್ ನಿಗೆ ಹುಲಿ ವೇಷ ಧರಿಸಿ ಕುಣಿಯಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು .ಈ ಬಾರಿಯ ನವರಾತ್ರಿಯ ಕೊನೆಯ ದಿನ ಹುಲಿ ವೇಷ ಹಾಕಿಸಿಕೊಂಡು ತನ್ನ ಆಸೆ ಪೂರೈಸಿದ್ದು ಪೊಳಲಿಯ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ.
ಸ್ಕೇಟಿಂಗ್ ಕೂಡ ಬಲ್ಲ ಯಜ್ಞೇಶ್ ಮಂಗಳೂರು ಕೊಟ್ಟಾರ ಚೌಕಿಯ ಅಮ್ಮಾ ನಿಲಯದ ಹರೀಶ್ಚಂದ್ರ- ತ್ರಿವೇಣಿ ದಂಪತಿಯ ಪುತ್ರ. ಮಂಗಳೂರು ಲೇಡಿಲ್ ಸೈಂಟ್ಅಲೋಸಿಯಸ್ ಶಾಲೆಯ ವಿದ್ಯಾರ್ಥಿ. ಇವನ ಅಣ್ಣ ಕಬಡ್ಡಿಯಲ್ಲಿ ಉತ್ತಮ ಆಟಗಾರ.
ಅಂದಹಾಗೆ ಹರೀಶ್ಚಂದ್ರ ಅವರು ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಯಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಕ್ಷೇತ್ರ ಕಲ್ಲುರ್ಟಿ ದ್ಯೆವಸ್ಥಾನ ಪನೋಳಿಬೈಲ್, ಸೌತಡ್ಕ ಮಹಾಗಣಪತಿ ಕೊಕ್ಕಡ, ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳೀ ದೇವಸ್ಥಾನ ಉಪ್ಪಿನಂಗಡಿ, ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಾಸ್ಥಾನ ನಂದಾವರ, ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಲ್ಲಿಯೂ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.






