ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಾರೆಕಾಡು ಆಶ್ರಯ ಕಾಲನಿಗೆ ಹೋಗುವ ರಸ್ತೆ ಕಾಂಕ್ರೀಟ್ ಮತ್ತು ಡಾಮರೀಕರಣ ಮತ್ತು ಬಾರೆಕಾಡು ಆಶ್ರಯ ಕಾಲನಿಯಿಂದ ಮಾದರೆಗುಡ್ಡೆ ಮರುಡಾಮರೀಕರಣದ ರೂ.18ಲಕ್ಷ ವೆಚ್ಚದ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿಪೂಜೆ ನೆರವೇರಿಸಿದರು .

KAR_0898ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ , ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್, ಬಂ.ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಜಗ ದೀಶ್ ಕುಂದರ್ , ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ಪ್ರವೀಣ್ ಬಿ. , ಗಂಗಾಧರ ಮಂಡಾಡಿ, ಪ್ರಭಾ ಸಾಲ್ಯಾನ್ , ಮಹಮ್ಮದ್ ಶರೀಫ್ , ಚಂಚಲಾಕ್ಷಿ, ಸಂಜೀವಿನಿ, ಜೆಸಿಂತಾ, ಮುಖ್ಯಾಧಿಕಾರಿ ಸುಧಾಕರ ಭಟ್ , ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *