ಮೂಡಬಿದರೆ: ಮಾರ್ಕೆಟ್‍ನಲ್ಲಿರುವ ಮಟನ್ ಮತ್ತು ಚಿಕನ್ ಸ್ಟಾಲ್‍ಗಳಿಗೆ ಬಿಡ್ ಹಾಕಿ ಏಲಂನಲ್ಲಿ ಭಾಗವಹಿಸಿ ಬಿಡ್ ಮಾಡದೆ ಒಳಗೊಳಗೆ ವ್ಯವಹಾರ ಕುದುರಿಸಿ ಪುರಸಭೆಗೆ ನಷ್ಟವುಂಟು ಮಾಡಲು ಪ್ರಯತ್ನಿಸುತ್ತಿರುವ ಬಿಡ್ಡುದಾರರ ಇಎಂಡಿ ಮೊತ್ತವನ್ನು ಮುಟ್ಟು ಗೋಲು ಹಾಕಿ ಹೊಸ ಟೆಂಡರ್ ಕರೆಯಲು ಪುರಸಭಾಧಿವೇಶನದಲ್ಲಿ ನಿರ್ಣಯಿಸಲಾಯಿತು.
mbd_oct26_4ಮೂಡುಬಿದರೆ ಪೇಟೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪಂಚರತ್ನ, ನವಮಿ ಮಾರ್ಟ್ ಹಾಗೂ ಬಸ್ ನಿಲ್ದಾಣದ ಖಾಲಿ ಪ್ರದೇಶದಲ್ಲಿ `ಪೇ ಪಾರ್ಕಿಂಗ್’ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಟೆಂಡರ್ ಕರೆಯಲು ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ  ಅಧ್ಯಕ್ಷತೆಯಲ್ಲಿ ನಡೆದ ಪುರಸಭಾಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಈ ವಿಷಯ ಪ್ರಸ್ತಾವಿಸಿದ ಪುರಸಭೆಯ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ಪೇಟೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಮುಂದುವರಿದಿದೆ. ಪಂಚರತ್ನ ಬಳಿ ಪಾರ್ಕಿಂಗ್‍ಗೆ ಮೀಸಲಿರಿಸಿದ ಸ್ಥಳದಲ್ಲಿ ಖಾಸಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದು ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು. ಈ ಕುರಿತು ಚರ್ಚಿಸಿ ವಾರ್ಷಿಕ ಗುತ್ತಿಗೆಯ ಆಧಾರದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಣಯಿಸಲಾಯಿತು.
ಪುರಸಭಾ ವ್ಯಾಪ್ತಿಯ ಹುಡ್ಕೋ ಕಾಲನಿ, ಕೆ ಎಚ್ ಬಿ ಕಾಲನಿಯ ಪಾರ್ಕ್ ಅಭಿವೃದ್ಧಿಗಾಗಿ ಗುತ್ತಿಗೆ ನೀಡುವುದಕ್ಕೆ ಹನೀಫ್ ಅಲಂಗಾರು ಆಕ್ಷೇಪಿಸಿದರು ಈ ಕಾಮಗಾರಿಗೆ ಟೆಂಡರ್‍ನಲ್ಲಿ ಸಿಂಗಲ್ ಬಿಡ್ ಬಂದಿರುವುದರಿಂದ ಮರು ಟೆಂಡರ್ ಕರೆಯಬೇಕೆಂದು ಹೇಳಿದರು. ಈ ಕಾಮಗಾರಿಗೆ ಈಗಾಗಲೇ ಇ ಟೆಂಡರ್ ಕರೆಯಲಾಗಿದೆ. ಮತ್ತೆ ಟೆಂಡರ್ ಕರೆಯುವ ಅಗತ್ಯವಿಲ್ಲ ಜಿಲ್ಲಾಧಿಕಾರಿಯವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಅವರ ಅನುಮತಿಯ ಬಳಿಕ ಕಾಮಗಾರಿ ಮುಂದುವರಿಸೋಣ ಎಂದು ಪಿ.ಕೆ ಥೋಮಸ್ ಹೇಳಿದರು. ಮೂಡುಬಿದರೆ ಪುರಸಭೆಗೆ ಬರುವ ವಿವಿಧ ಅನುವಾದಗಳನ್ನು ಪೇಟೆಯ ಮೂರು ವಾರ್ಡ್‍ಗಳಿಗೆ ಮಾತ್ರ ವಿನಿಯೋಗಿಸಲಾಗುತ್ತದೆ. ನಮ್ಮ ವಾರ್ಡ್‍ಗಳಲ್ಲಿ ಕಾಮಗಾರಿ ನಡೆಸುವಂತೆ ಹಲವು ಮೀಟಿಂಗ್‍ಗಳಲ್ಲಿ ಒತ್ತಾಯಿಸಿದ್ದರೂ ಪ್ರಯೋಜನವಿಲ್ಲ. ನೀವು ತಾರತಮ್ಯ ಮಾಡುತ್ತಿದ್ದೀರಿ ಎಂದು ಪ್ರೇಮಾ ಸಾಲ್ಯಾನ್ ಅಸಮಧಾನ ವ್ಯಕ್ತಪಡಿಸಿದರು. ನಾನು ಯಾವುದೇ ರೀತಿ ತಾರತಮ್ಯ ಮಾಡಿಲ್ಲ ನಗರೋತ್ಥಾನ ಯೋಜನೆಯಡಿ ಬರುವ ಅನುದಾನವನ್ನು ಎಲ್ಲಾ ವಾರ್ಡುಗಳಿಗೆ ಮೀಸಲಿಡುತ್ತೇವೆ. ಎಲ್ಲಾ ಸದಸ್ಯರು ತಮ್ಮ ವಾರ್ಡ್‍ಗಳ ಅಗತ್ಯ ಕಾಮಗಾರಿಗಳ ಮಾಹಿತಿ ನೀಡುವಂತೆ ಅಧ್ಯಕ್ಷೆ ರೂಪಾ ಶೆಟ್ಟಿ ಉತ್ತರಿಸಿದರು. ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮುಖ್ಯಾಧಿಕಾರಿ ಶೀನ ನಾಯ್ಕ್, ಇಂಜಿನಿಯರ್ ದಿನೇಶ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *