ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ನವದುರ್ಗೆಯರು, ಗಣಪತಿ ಮತ್ತು ಶ್ರೀ ಶಾರದಾ ದೇವಿ ವಿಗ್ರಹಗಳ ವೈಭವದ ಮಂಗಳೂರು ದಸರಾ ಮೆರವಣಿಗೆ ಶನಿವಾರ ಮುಂಜಾನೆಯ ಸಮಯ ಶಾರದಾ ದೇವಿಯ ವಿಸರ್ಜನೆ ನನಗರದಲ್ಲಿ ಭವ್ಯವಾಗಿ ನಡೆಯಿತು
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ನವದುರ್ಗೆಯರು, ಗಣಪತಿ ಮತ್ತು ಶ್ರೀ ಶಾರದಾ ದೇವಿ ವಿಗ್ರಹಗಳ ವೈಭವದ ಮಂಗಳೂರು ದಸರಾ ಮೆರವಣಿಗೆ ಶನಿವಾರ ಮುಂಜಾನೆಯ ಸಮಯ ಶಾರದಾ ದೇವಿಯ ವಿಸರ್ಜನೆ ನನಗರದಲ್ಲಿ ಭವ್ಯವಾಗಿ ನಡೆಯಿತು
ಸಂಜೆ ಕುದ್ರೋಳಿ ಕ್ಷೇತ್ರದಿಂದ ಶ್ರೀ ಶಾರದಾ ಮಾತೆಯ ಮಂಗಳೂರು ದಸರಾ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆ ಇಳಿಸಂಜೆ ಹೊತ್ತು ಆರಂಭಗೊಂಡಿತು. ದೇವಸ್ಥಾನದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ದಿದಾತ್ರಿ, ಶಾರದೆಯನ್ನು ದೇವಸ್ಥಾನದ ಆವರಣಕ್ಕೆ ತಂದಿರಿಸಲಾಯಿತು. ಶಾರದಾ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದ ಬಳಿಕ, ಭಕ್ತ ಜನಸಾಗರದ ಜಯ ಘೋಷಗಳೊಂದಿಗೆ ಭವ್ಯವಾಗಿ ಅಲಂಕೃತಗೊಳಿಸಲಾದ ವಾಹನಗಳಿಗೆ ಏರಿಸಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ , ಲೋಕೇಶ್ ಶಾಂತಿ ಪೂಜೆ ನೆರವೇರಿಸಿದರು. ದೇವಸ್ಥಾನ, ಅಭಿವೃದ್ದಿಯ ರೂವಾರಿ ಬಿ.ಜನಾರ್ದನ ಪೂಜಾರಿ ಗಣ್ಯರನ್ನು ಸನ್ಮಾನಿಸಿ, ದೇವರಲ್ಲಿ ಪಾಥರ್ಿಸಿದರು. ಸಚಿವರಾದ ವಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಶ್ರೀ ಕ್ಷೇತ್ರ ಅಭಿವೃದ್ದಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್ ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ ಆರ್.,ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ. ಸುವರ್ಣ, ಟ್ರಕ್ಗಳು, ಸಾಲುಸಾಲು ಬಣ್ಣದ ಕೊಡೆಗಳು, ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್, ಭಜನಾ ತಂಡಗಳ ಕುಣಿತ ಸಹಿತ ನೂರಾರು ವೈವಿಧ್ಯಮಯ ಸಾಂಸ್ಕೃತಿಕ ವೈಭವಗಳು ಮೇಳೈಸಿದ ಭವ್ಯ ಮೆರವಣಿಗೆ ದೇವಸ್ಥಾನದಿಂದ ಹೊರಟು ಮಣ್ಣಗುಟ್ಟೆ, ಲೇಡಿಹಿಲ್, ಲಾಲ್ ಭಾಗ್, ಬಳ್ಳಾಲ್ ಭಾಗ್, ಪಿವಿಎಸ್ ಸರ್ಕಲ್, ಹಂಪನಕಟ್ಟೆ, ವಿವಿ ಕಾಲೇಜು ವೃತ್ತಕ್ಕಾಗಿ ಕಾರ್ ಸ್ರ್ಟೀಟ್, ಅಳಕೆ ಮೂಲಕ ಕುದ್ರೋಳಿ ಕಡೆಗೆ ಸಾಗಿತು. ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲ ನಡುವೆ ಸಾವಿರಾರು ಭಕ್ತರು ಕುಳಿತು, ನಿಂತು ಮೆರವಣಿಗೆ ವೀಕ್ಷಿಸಿ ಸಂಭ್ರಮಿಸಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರು .
ಚಿತ್ರಗಳು ಮಧು.













