ಬಂಟ್ವಾಳ: ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ ಪಿಎಸ್‍ಐ ನಂದಕುಮಾರ್.ಎಂ.ಎಂ ಅವರ ಅದ್ಯಕ್ಷತೆಯಲ್ಲಿ ನಡೆಯಿತು . ಈ ಸಬೆಯಲ್ಲಿ ಮುಖಂಡರುಗಳಾದ ಬೇಬಿ ಮೈರಾನ್ ಪಾದೆ, ಗಂಗಾಧರ ಪರಾರಿ ಇನ್ನಿತರರು ಬಾಗವಹಿಸಿದ್ದು, ಅಪರಾಧ ವಿಭಾಗದ ಪಿಎಸ್‍ಐ ಕೆ.ಗಂಗಾಧರಪ್ಪ ಮತ್ತು ಗ್ರಾಮಾಂತರ ಠಾಣಾ ಸಹಾಯಕ ಪೊಲೀಸ್ ಉಪ-ನಿರೀಕ್ಷರಾದ ಶ್ರೀ ರಮೇಶ್ ಉಪಸ್ಥಿತರಿದ್ದರು.

