ಕೈಕಂಬ: ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ಇಂಟರ್ ನ್ಯಾಷನಲ್ ಸಂಸ್ಥೆಯು ಪೋಷಕತ್ವವವನ್ನು ಹೊಂದಿರುವ ಮಕ್ಕಳಿಗೆ ಸೈಕಲ್ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಅ. 20ರಂದು ಮಂಗಳವಾರ  ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ನಡೆಸಲಾಯಿತು

20vp udgatane

20 vp sykl vitharane1

20 vp udgatane
20 vp sycle vitharane

_20 vp checq vitharaneಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜೆಸಿಂತ ವಿಜಯ ಅಲ್ಫ್ರೆಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮತ್ತು ಸೈಕಲ್ ವಿತರಿಸಿ ಮಾತನಾಡುತ್ತಾ ಸಮಾಜದಲ್ಲಿ ಸಮಾನತೆ ಸಿಗಬೇಕು, ಎಲ್ಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ದುಡಿಯುವ ಸಂಸ್ಥೆ ಇದಾಗಿದೆ ಎಂದು ತಿಳಿಸಿದರು.

ಮಂಗಳಜ್ಯೊತಿ ಸಮಗ್ರ ಶಾಲೆಯ ಚೈಲ್ಡ್‍ಫಂಡ್ ಇಂಟರ್ ನ್ಯಾಷನಲ್ ಯು. ಎಸ್. ಎ. ಇದರ ಯೋಜನಾಧಿಕಾರಿ ಪುನೀತ್ ಶೆಟ್ಟಿ ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾ¸ಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಒಟ್ಟು 114 ಫಲಾನುಭವಿಗಳಿಗೆ 4,51,700/- ರೂಪಾಯಿಯ ವಿದ್ಯಾರ್ಥಿ ವೇತನ ಮತ್ತು ಮಕ್ಕಳಿಗೆ ಶಾಲೆಗಳಿಗೆ ಬರಲು ಅನುಕೂಲವಾಗುವ ದೃಷ್ಟಿಯಿಂದ 31 ಮಕ್ಕಳಿಗೆ 1,35,000/- ವೆಚ್ಚದಲ್ಲಿ ಸೈಕಲ್ ವಿತರಿಸಲಾಗುವುದು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ. ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಅನುಕೂಲತೆಗಳು ಹೆಚ್ಚಾದಂತೆ ಅಭಿವೃದ್ಧಿಗೆ ಉಳಿದ ಸಮಯವನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದು ಮುಖ್ಯ. ಹೆತ್ತವರು ಮಕ್ಕಳಿಗೆ ಸಾಧನೆ ಮತ್ತು ಯಶಸ್ಸಿನ ಬಗ್ಗೆ ಮಾತ್ರ ಆಸೆಹುಟ್ಟಿಸಬಾರದು. ಮಕ್ಕಳಿಗೆ ಕಲಿತ ಸತ್ಯವನ್ನೇ ಹೇಳಬೇಕು. ನಾವು ಬೆಳೆದಿದ್ದೇವೆ, ಅನುಕೂಲತೆಗಳು ಹೆಚ್ಚಿವೆ, ಮಾನವ ಸಂಬಂಧಗಳನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರ್ಯಕ್ರಮವು ಸ್ವಾರ್ಥದಿಂದ ಸಹಕಾರಕ್ಕೆ ಹೋಗುವಂತಹ ಚಲನೆಯ ದಾರಿಯನ್ನು ತೋರಿಸುತ್ತ್ತದೆ. ಎಲ್ಲರೊಂದಿಗೆ ಬದುಕುವ ಸೌಜನ್ಯ, ಸಭ್ಯತೆಯನ್ನು ಬೆಳೆಸುವ ಕಾರ್ಯವನ್ನು ಶಾಲೆ ಮತ್ತು ಹೆತ್ತವರು ಮಾಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವಿದ್ಯಾರ್ಥಿ ವೇತನವನ್ನು ಎಮ್. ಪಿ. ಜ್ಞಾನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಗಳೂರು ದಕ್ಷಿಣ ವಲಯ ಇವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ಸ್ವಾಗತಿಸಿ, ರಮ್ಯ ಕಾರ್ಯಕ್ರಮ ನಿರೂಪಿಸಿದರು, ಚಂದ್ರಿಕಾ ವಂದಿಸಿದರು.

By suddi9

Leave a Reply

Your email address will not be published. Required fields are marked *