ಬಂಟ್ವಾಳ; ಆಡಂಬರದ ಪೂಜೆಗಿಂತಲೂ ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆ ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದು ಉದ್ಯಮಿ ನಂದಗೋಪಾಲ ಶೆಣೈ ಹೇಳಿದ್ದಾರೆ. ಅವರು ಕಲ್ಲಡ್ಕದಲ್ಲಿ ಶ್ರೀ ಶಾರದಾ ಪೂಜಾರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 38 ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಶಾಂತಾರಾಮ ಕಲ್ಲಡ್ಕ ಸ್ಮರಣಾರ್ಥ ನೀಡುವ ಶಾಂತಶ್ರೀ ಪ್ರಶಸ್ತಿಯನ್ನು ನಾಟಿ ವೈದ್ಯ ಬಾಲಪ್ಪ ಪಂಡಿತ್ ಶಾಂತಿಗುಡ್ಡೆಯವರಿಗೆ ಪ್ರದಾನ ಮಾಡಿ ಮಾತನಾಡಿದರು. 20

ನಮ್ಮೊಳಗಿನ ದೇವರನ್ನು ಹುಡುಕುವ ಕಾರ್ಯ ಮೊದಲು ನಡೆಯಬೇಕು ಎಂದ ಅವರು ಪುರಾಣಗಳೆಲ್ಲವೂ ಅಂತಹಾ ಅರಿವನ್ನು ನಮ್ಮೊಳಗೆ ಮೂಡಿಸಿದೆ ಎಂದರು.ಸಂಘಟನೆಯ ಜೊತೆಯಲ್ಲಿ ಸಂಸ್ಕಾರವನ್ನು ಪಸರಿಸಲು ಶಾರದಾ ಪೂಜಾ ಮಹೋತ್ಸವ ಹೆಚ್ಚು ಕಾರಣೀಭೂತವಾಗಿದೆ ಎಂದವರು ಅಭಿಪ್ರಾಯಪಟ್ಟರು. ಗೋಳ್ತಮಜಲು ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ ಎಸ್.ಅಧ್ಯಕ್ಷತೆ ವಹಿಸಿದ್ದರು.ಶಕ್ತಿಯ ಆರಾಧನೆ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇಂತಹಾ ಆಚರಣೆಗಳು ನಮ್ಮಲ್ಲಿ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ ಎಂದರು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ನರಸಿಂಹ ಕಲ್ಲಡ್ಕ ಉಪಸ್ಥಿತರಿದ್ದರು. ಇದೇ ವೇಳೆ ನೃತ್ಯ ಸ್ಪಧರ್ೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಜಿತಾ ಳನ್ನು ಗೌರವಿಸಲಾಯಿತು.
ಸಮಿತಿಯ ಪದಾಧಿಕಾರಿಗಳಾದ ಚಿ.ರಮೇಶ್ ಕಲ್ಲಡ್ಕ, ಸತೀಶ್ ರಾಮನಗರ, ಗಣೇಶ್ ಶೆಟ್ಟಿ, ವಜ್ರನಾಥ ಮಡ್ಲಮಜಲು, ಶಿವರಾಮ ಕೊಳಕೀರು, ಗೋಪಾಲಕಲ್ಲಡ್ಕ, ಸವ್ಯರಾಜ್, ವಿಕ್ರಮ ಪ್ರಭು, ದಿನೇಶ್ ರಾಮನಗರ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ನಾಗರಾಜ ರಾಮನಗರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಯತಿನ್ ಕುಮಾರ್ ವಂದಿಸಿದರು. ಜತೆ ಕೋಶಾಧಿಕಾರಿ ರಾಜೇಶ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

ಕಲ್ಲಡ್ಕದಲ್ಲಿ ಶ್ರೀ ಶಾರದಾ ಪೂಜಾರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 38 ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಶಾಂತಾರಾಮ ಕಲ್ಲಡ್ಕ ಸ್ಮರಣಾರ್ಥ ನೀಡುವ ಶಾಂತಶ್ರೀ ಪ್ರಶಸ್ತಿಯನ್ನು ನಾಟಿ ವೈದ್ಯ ಬಾಲಪ್ಪ ಪಂಡಿತ್ ಶಾಂತಿಗುಡ್ಡೆಯವರಿಗೆ ಪ್ರದಾನ ಮಾಡಲಾಯಿತು

By suddi9

Leave a Reply

Your email address will not be published. Required fields are marked *