ಕೈಕಂಬ: ದೇವಳದಲ್ಲಿ ಗ್ರಾಮದ ಸಮಗ್ರತೆಯ ಕೇಂದ್ರವಾಗಿ ಉದ್ದೀಪನಗೊಳ್ಳಬೇಕು ದೇಗುಲ ಹಾಗೂ ಶಾಲೆಗಳು ಗ್ರಾಮದ ನಿಜಸ್ಥಿತಿಯ ಕನ್ನಡಿಯಂತೆ ನಿರ್ಜನಾರಣ್ಯ ಪ್ರದೇಶವೊಂದನ್ನು ಅಭಿವೃದ್ಧಿ ಪಡಿಸಿದ್ಧ ಸಾರ್ಥಕ ಸಾಧಕ ನಿರಂಜನ ಸ್ವಾಮೀಜಿ ಅವರ ಧ್ಯೇಯ… ಪರಿಕಲ್ಪನೆಗಳೂ ಸಾಕಾರಗೊಳ್ಳುವಂತಾಗಲೂ ಎಲ್ಲರೂ ಸಹಕಾರ ನೀಡಬೇಕು ಎಂದು ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೆಳಿದರು.
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮಗಳ ಸಂದರ್ಭ ದೇವಳದ ನೂತನ ವೆಬ್ ಸೈಟ್ ಅನಾವರಣ ಸಮಾರಂಭದಲ್ಲಿ ಅವರು ಶುಭಾಶೀರ್ವಚನ ನೀಡಿದರು.
ದೇವಳದ ಟ್ರಸ್ಟಿ ನಾರಾಯಣ ಎನ್.ಪೂಜರಿ ಉದ್ಯಮಿ ಗಣೇಶ್ ಬಂಗೇರ ಅವರು ನೂತನ ವೆಬ್ ಸೈಟ್ಗೆ ಚಾಲನೆ ನೀಢಿದರು ಏಕೀಕರಣ ಸಮಿತಿಯ ಅಧ್ಯಕ್ಷ ರವಿ ಪೂಜಾರಿ, ದೀಪಕ್ ಕೋಟ್ಯಾನ್, ಉರ್ಮಿಳಾ ರಮೇಶ್ ವಕೀಲ ವಿನೋದರ ಪೂಜಾರಿ, ಕಿಶೋರ್ ಕಬೆತ್ತಿಗುತ್ತು, ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ , ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ಧರು.
ದೇವಳಕ್ಕೆ ವೆಬ್ ಸೈಟ್ ನ ಬಗ್ಗೆ ಅಗತ್ಯೆತೆಯನ್ನು ಮನಗಂಡು ದೀಪಕ್ ಕೋಟ್ಯಾನ್ ಅವರು ವೆಬ್ ಸೈಟ್ ನ ಸಂಪೂರ್ಣ ಖರ್ಚುವೆಚ್ಚವನ್ನು ನೀಡಿದ ಅವರು ಪ್ರಾಸ್ತಾವಿಕ ಮಾತನಾಡಿದ ದೀಪಕ್ ಕೋಟ್ಯಾನ್ *ದೇಗುಲ ಹಾಗೂ ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಹನ ಹಾಗೂ ಕ್ಷೇತ್ರಕ್ಕೆ ಸಂಬಂದಿಸಿದ ಮಾಹಿತಿಗಳ ಸಂಗ್ರಹಣೆ-ಪ್ರಸರಣಕ್ಕೂ ಸಹಕಾರಿಯಾಗಲಿದೆ ಎಂಬುದು ಪ್ರಮುಖ ಧ್ಯೇಯ* ಎಂದು ಹೇಳಿದರು
ವಸಂತ ಕೆ ಸ್ವಾಗತಿಸಿ, ಸೌಮ್ಯ ಸುನೀಲ್ ವಂದಿಸಿದರು ವಿಶ್ವನಾಥ ಪೂಜಾರಿ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
(www.snsaptemplebajpe.org )mail id mail@snsaptemplebajpe.org
sri Ambika Annapoorneshwari Temple ph. 08242252303




















