ಬೆಂಗಳೂರು : ಬೆಂಗಳೂರು ಕೆ.ಹೆಚ್ ರಸ್ತೆಯಲ್ಲಿನ (ಡಬಲ್ಸ್ ರೋಡ್) ಮನಿ ಟೇರೆಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಾಧುನಿಕವಾಗಿ ನವೀಕೃತ ಗೊಳಿಸಿದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದನ್ನು ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ದೀಪ ಪ್ರಜ್ವಲಿಸಿ ಸೇವಾರ್ಪಣೆಗೈದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ವಸಂತ ಬಂಗೇರಾ, ಕೆ.ಸುಬ್ರಹ್ಮಣ್ಯಂ, ಹರೀಶ್ ಮೂಲ್ಕಿ, ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ನಿರ್ದೇಶಕರುಗಳಾದ ಚಂದ್ರಶೇಖರ ಎಸ್. ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿಬ್ಯಾಂಕ್‍ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್, ಉಪ ಪ್ರಧಾನ ಪ್ರಬಂಧಕರುಗಳಾದ ಮೋಹನ್‍ದಾಸ್ ಹೆಜ್ಮಾಡಿ ಉಪಸ್ಥಿತರಿದ್ದರು.
ಉಪ ಪ್ರಧಾನ ಪ್ರಬಂಧಕ ಹಾಗೂ ಶಾಖೆಯ ಮುಖ್ಯಸ್ಥ ಕಿಶೋರ್ ಡಿ.ಕೋಟ್ಯಾನ್ ಸ್ವಾಗತಿಸಿದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಶಾಖೆಯ ಅಧಿಕಾರಿಗಳಾದ ಹೇಮಾ ಭಾಸ್ಕರ್, ದಕ್ಷಜಿನಿ ಆರ್.ಅಮೀನ್, ರಾಜೇಂದ್ರ ಪ್ರಸಾದ್, ಸಂದೇಶ್ ಎಂ., ದೀಪಾ ನಾಗರಾಜ್, ರಜಿತಾ ಪೂಜಾರಿ, ನಿರಂಜನ್ ಕೊಠಾರಿ, ಚೇತಾಲಿ ಸುವರ್ಣ, ಅರ್ಪಿತಾ ಪೂಜಾರಿ, ಭಾಸ್ಕರ್ ಸರಪಾಡಿ, ಸುಧಾ ಕೋಟ್ಯಾನ್, ದೇವಕಿ ಕಿರೋಡಿಯನ್, ಸತೀಶ್ ಸುವರ್ಣ, ಅವಿನಾಶ್ ಪೂಜಾರಿ, ಅನೂಪ್ ಕೋಟ್ಯಾನ್, ಪ್ರಶಾಂತ್ ಕೆ.ವಿ., ಭಾಸ್ಕರ್ ಪಿ.ಪೂಜಾರಿ, ಸದಾನಂದ್ ಪೂಜಾರಿ ಉಪಸ್ಥಿತರಿದ್ದು, ಅವರನ್ನೆಲ್ಲರನ್ನೂ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಅನಿಲ್‍ಕುಮಾರ್ ಆರ್.ಅವಿೂನ್, ಶೋಭಾ ದಯಾನಂದ್ ಅವರು ಪುಷ್ಪಗುಪ್ಚವನ್ನೀಡಿ ಗೌರವಿಸಿದರು. ಮಂಜುನಾಥ ಶಾಂತಿ ಅವರು ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ವಾಸ್ತುಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಆಶೀರ್ವಚನಗೈದರು. ಸಂಧ್ಯಾ ಸೂರ್ಯಕಾಂತ್ ಮತ್ತು ಸೂರ್ಯಕಾಂತ್ ಅಂಚನ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಹಿರಿಯ ಪ್ರಬಂಧಕ ಸತೀಶ್ ಪಿ.ಪೂಜಾರಿ ವಂದಿಸಿದರು.








