ಕೈಕಂಬ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಮೀಸಲಿಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಡಪದವು ಗ್ರಾ.ಪಂ ವ್ಯಾಪ್ತಿಯಲ್ಲಿ ನೀರು ಶುದ್ದೀಕರಣ ಘಟಕ ಪ್ರಾರಂಭಿಸಲು ಉದ್ದೇಶಿಸಲಾಗಿದೆ.. ಎಡಪದವು ಗ್ರಾಮವನ್ನು *ಸ್ಮಾರ್ಟ್ ಗ್ರಾಮ* ವಾಗಿ ಪರಿವರ್ತಿಸುವ ಕನಸು ನನ್ನದು* ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಬಿ.ಎ ಮೊಯಿದಿನ್ ಬಾವಾ ಹೇಳಿದರು.

ಅವರು ಗುರುವಾರ ಎಡಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ 44 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಕ್ರಿಟೀಕರಣ ಕಾಮಗಾರಿಕೆ ಶಿಲನ್ಯಾಸ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.
*ವಿದಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಅವಯಲಲಿ 150 ಕೋಟಿ ರೂ.ಗಳ ಕಾಮಗಾರಿ ಆಗಿದ್ಧು ಈ ಅವಯ ಪೂರ್ಣ 2ಕೋಟಿ ಅನುದಾನ ಗುರುಪುರ ಹೋಬಳಿಯ ಪಂಚಾಯಿತಿಗಳಿಗಾಗಿ ಮೀಸಲರಿಸಲಾಗಿದೆ. ಒಡ್ಡೂರು-ಗಂಜಿಮಠ-ಕೋರ್ಡೆಲ್ ರಸ್ತೆಗೆ 2 ಕೋಟಿ ರೂ. ಅನುದಾನ ಈಗಾಗಲೇ ಮಂಜೂರಾತಿ ಆಗಿದೆ.
ಗ್ರಾ.ಪಂ ಸದಸ್ಯರು,ಸ್ಥಳೀಯ ಪ್ರಮುಖರು, ಮಾಜಿ ತ.ಪಂ ಸದಸ್ಯ ನೋರ್ಬಟ್ ಮಥಾಯಸ್, ಗುರುಪುರ ಬ್ಲಾಕ್ ಕಾಂಗ್ರೆಸ್ ಪದಾಕಾರಿಗಳು ಉಪಸ್ಥಿತರಿದ್ಧರು.






