ಕೈಕಂಬ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ನವರಾತ್ರಿ  ಮಹೋತ್ಸವವು ಅ.13-10-2015ನೇ ಮಂಗಳವಾರದಿಂದ ಅ.23-10-2015ನೇ ಶುಕ್ರವಾರದವರೆಗೆ ನಡೆಯಲಿದೆ.

01 13-10-2015ನೇ ಮಂಗಳವಾರ ಪೂರ್ವಹ್ನ ಗಂಟೆ 8ರಿಂದ ಪ್ರಾರ್ಥನೆ, ತೋರಣ ಮುಹೂರ್ತ, ಗಣಯಾಗ, ನವಕಲಾಶಾಭಿಷೇಕ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ನವರಾತ್ರಿ ಪೂಜಾರಂಭ, ನಾಗತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7.00 ಗಂಟೆಗೆ “ಶ್ರೀ ಆದಿಶಕ್ತಿ ಭಜನಾ ಮಂಡಳಿ” ಇವರಿಂದ ಭಜನೆ, ರಾತ್ರಿ 9.00 ಗಂಟೆಗೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
14-10-2015ರಂದು ಬುಧವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7.00 ಗಂಟೆಗೆ ಶ್ರೀ ಆದಿಶಕ್ತಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ, 9.00 ಗಂಟೆಗೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
15-10-2015 ನೇ ಗುರುವಾರರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.00ರಿಂದ ಶ್ರೀ ಕಾವೇಶ್ವರ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 9.00 ಗಂಟೆಗೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
16-10-2015 ಶುಕ್ರವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ವಿಠೋಭ ಭಜನಾ ಮಂಡಳಿ ಪಲ್ಲಿಪಾಡಿ ಇವರಿಂದ ಭಜನೆ, ರಾತ್ರಿ 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
17-10-2015ರಂದು ಶನಿವಾರ ಧರ್ಮದೈವಗಳಿಗೆ ಪರ್ವ, ಮಧ್ಯಾಹ್ನ ಸಾರ್ವಜನಿಕ ಶನಿಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ರಾತ್ರಿ 9.30ರಿಂದ ಚಾರ್ಮಿಂಗ್ ಗೈಸ್ ತಂಡದಿಂದ “ಬಲೇ ತೆಲಿಪುಗ”-ವೈವಿಧ್ಯಮಯ ಕಾರ್ಯಕ್ರಮ.
18-10-2015 ನೇ ಭಾನುವಾರ ಪೂರ್ವಾಹ್ನ ಶಾರದಾ ಪ್ರತಿಷ್ಠೆ, ಮಧ್ಯಾಹ್ನ 12.15ಕ್ಕೆ ಚಂಡಿಕಾಯಾಗ, ಮಹಾಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ. ಮಧ್ಯಾಹ್ನ 1.00 ಗಂಟೆಯಿಂದ ಸಂಜೆ 6.00ರ ತನಕ ಯಕ್ಷ ಕಲಾ ಸಂಘ (ರಿ) ವರಕೋಡಿ ಯಕ್ಷಧಾಮ ಇದರ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ “ಶ್ರೀ ದೇವಿ ಮಹಾತ್ಮೆ”. ಸಂಜೆ 5.00ಕ್ಕೆ ಕಲ್ಲುರ್ಟಿ ಮತ್ತು ಸನ್ಯಾಸಿ ಮಂತ್ರದೇವತೆಗೆ ಎಣ್ಣೆ ಬೂಳ್ಯ ,7.00ರಿಂದ ಕಲ್ಲುರ್ಟಿ ಮತ್ತು ಸನ್ಯಾಸಿ ಮಂತ್ರದೇವತೆಗೆ ಕೋಲಬಲಿ ನಡೆಯಲಿದೆ. ರಾತ್ರಿ 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
19-10-2015ನೇ ಸೋಮವಾರ ಮಧ್ಯಾಹ್ನ ಮಹಾಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ, ರಾತ್ರಿ 7.00ಕ್ಕೆ ಕಾವೇಶ್ವರ ಯಕ್ಷಗಾನ ಮಂಡಳಿಯವರಿಂದ ತಾಳಮದ್ದಳೆ, 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ.
20-10-2015 ಮಂಗಳವಾರ ಮಧ್ಯಾಹ್ನ ಮಹಾಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ, ಸಂಜೆ 7.00ಕ್ಕೆ ಮಣೆಕಂಠ ಭಜನಾ ಮಂಡಳಿ ಮಣಿಕಂಠಪುರ ಇವರಿಂದ ಭಜನೆ, ಅಪ್ಪದಪೂಜೆ, ರಾತ್ರಿ 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ.
21-10-2015 ಬುಧವಾರ ಮಧ್ಯಾಹ್ನ ಮಹಾಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ , ರಾತ್ರಿ 9.00ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಶಾರದಾಪೂಜೆ, ಅನ್ನಸಂತರ್ಪಣೆ.
9.30ರಿಂದ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ.
22-10-2015 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಶಾರದಾಪೂಜೆ, ಸಂಜೆ 5.00ರಿಂದ ಸಾರ್ವಜನಿಕ ದುರ್ಗಾನಮಸ್ಕಾರ ಪೂಜೆ, ಅನ್ನಸಂತರ್ಪಣೆ. ಬಳಿಕ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಹಾಗೂ ವಿವಿಧ ವೇಶ ವಿನೋದಾವಳಿಗಳೊಂದಿಗೆ ಶಾರದಾ ಮಾತೆಯ ಶೋಭಾಯಾತ್ರೆ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜನೆ.
23-10-2015 ನೇ ಶುಕ್ರವಾರ- ದಶಮಿ- ಪೂರ್ವಾಹ್ನ 8.00ಕ್ಕೆ ಕಲಶ ವಿಸರ್ಜನೆ ನಡೆಯಲಿದೆ.

By suddi9

One thought on “ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ನವರಾತ್ರಿ ಮಹೋತ್ಸವ”

Leave a Reply

Your email address will not be published. Required fields are marked *