ಬಂಟ್ವಾಳ : ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲದ ಬಡ ಜನತೆಗೆ 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ವಿಟ್ಲದ ನಾಲ್ಕು ಮಾರ್ಗ ಸೇರುವ ಜಂಕ್ಷನ್ನಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ, ಪ್ರತಿಭಟನಾ ಸಭೆ ನಡೆಸಿದ್ದು ಕೇವಲ ನಾಟಕ. ಬಡವರಿಗೆ 94ಸಿ ಹಕ್ಕುಪತ್ರ ಆದೇಶ ಸಿಗಲಿರುವ ಮಾಹಿತಿ ಪಡೆದೇ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಬಿಜೆಪಿಗೆ ಪ್ರತಿಭಟನೆಯ ಚಾಳಿ. ಈ ಹಿಂದೆ ಅರ್ಜಿ ಸಲ್ಲಿಸಿದ ಸುಮಾರು 400 ಮಂದಿಗೂ 94ಸಿ ಯೋಜನೆಯ ಮೂಲಕವೇ ಹಕ್ಕುಪತ್ರ ವಿತರಿಸಲಾಗುವುದು. ಇನ್ನು ಮುಂದೆ ಹೊಸ ಅರ್ಜಿ ನೀಡುವವರಿಗೆ ಮಾತ್ರ 94ಸಿಸಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಆದರೆ 94ಸಿ ಯೋಜನೆಯ ಬ್ರೋಕರ್ಗಿರಿಯ ಅವಕಾಶವನ್ನು ಬಿಜೆಪಿಗೆ ಕೊಡುವುದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ವಿಟ್ಲ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಅವರು ಮಾತನಾಡಿದರು.

ಸಂಜೀವ ಮಟಂದೂರು ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಹತಾಶರಾಗಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ನಿದ್ದೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಭೆಯಲ್ಲೋ ವಾಹನದಲ್ಲೋ ಸ್ವಲ್ಪ ನಿದ್ದೆ ಮಾಡಿರಬಹುದು. ಮನುಷ್ಯನಿಗೆ ನಿದ್ದೆ ಸಹಜ, ಆದರೆ ಬಿಜೆಪಿ ಸರಕಾರದ ಸಚಿವರಂತೆ ಬ್ಲೂ ಫಿಲ್ಮ್ ನೋಡಿದ್ದ ? ಸಚಿವ ರೈ ಅವರು ಯಾವತ್ತೂ ಬಿಜೆಪಿ ಶಾಸಕ, ಸಚಿವರಂತೆ ಕೀಳು ಅಭಿರುಚಿಯನ್ನು ಹೊಂದಿಲ್ಲ. ಕಾಂಗ್ರೆಸ್ ಸರಕಾರದ ನೇತೃತ್ವದಲ್ಲಿ ಜಿಲ್ಲೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮಾಡಿದೆ ಎನ್ನುವ ಸಂಜೀವ ಅವರು ತನ್ನ ಬಿಜೆಪಿ ನೇತೃತ್ವದ ಹಿಂದಿನ ಸರಕಾರದ ದುರವಸ್ಥೆಯನ್ನು, ಭ್ರಷ್ಟಾಚಾರ ನಡೆಸಿ, ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿನಲ್ಲಿದ್ದಾರೆ. ಆದುದರಿಂದ ನೈತಿಕತೆ ಇಲ್ಲದ ಬಿಜೆಪಿಯ ಭ್ರಷ್ಟಾಚಾರದ ಪಾಠವನ್ನು ಕಾಂಗ್ರೆಸ್ ಕಲಿಯುವುದಿಲ್ಲ. ಬಡವರ ಬಗ್ಗೆ ಹಸಿವಿನ ಬಗ್ಗೆ ಕಾಂಗ್ರೆಸ್ ಸ್ಪಂದಿಸಿ, ವಿವಿಧ ಭಾಗ್ಯಗಳನ್ನು ಯೋಜನೆಗಳನ್ನು ರೂಪಿಸಿದೆ. ಬಿಜೆಪಿಯವರಿಗೆ ಐಷಾರಾಮದ ಜೀವನ ಗೊತ್ತು. ಶ್ರೀಮಂತರು, ಹಣವಂತರು ಇರುವುದರಿಂದ ಅವರಿಗೆ ಬಡವರ ಹಸಿವಿನ ನೋವು ಹೇಗೆ ಅರ್ಥ ಆಗಬೇಕು ? ಎಂದು ಪ್ರಶ್ನಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಕೂದಲಿನ ಬಗ್ಗೆ ಮಾತನಾಡಿದ್ದಾರೆ. ಸಿದ್ಧರಾಮಯ್ಯ ಅವರು ಯಡಿಯೂರಪ್ಪ ಅವರ ಕೂದಲಿಗೂ ಸಮಾನ ಅಲ್ಲ ಎಂದೇನೋ ಹೇಳಿಕೆ ನೀಡಿದ್ದಾರೆ. ಇದು ಶೋಭಾ ಅವರಿಗೆ ಶೋಭೆ ತರುವ ಮಾತಲ್ಲ. ಅವರು ಇಷ್ಟೆಲ್ಲ ಕೆಟ್ಟದಾದ ಕೀಳುಮಟ್ಟದ ಹೇಳಿಕೆಗಳನ್ನು ಕೊಡಬಾರದು ಎಂದು ಹೇಳಿದ ಅವರು ಎತ್ತಿನಹೊಳೆ ಯೋಜನೆಯ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲು ಅವರು ಪಾದಯಾತ್ರೆ ಮಾಡುತ್ತಾರಂತೆ. ಅವರು ತನ್ನದೇ ಪಕ್ಷದ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮಾಜಿ ಉಪಾಧ್ಯಕ್ಷ ಅಬ್ದುಲ್ಖಾದರ್, ಮಾಜಿ ಸದಸ್ಯರಾದ ವಿ.ಕೆ.ಎಂ.ಅಶ್ರಫ್, ವಿ.ಎಚ್.ಸಮೀರ್ ಪಳಿಕೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *