ಮುಂಬಯಿ : ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಕ್ರಿಯ ಕಾರ್ಯಕರ್ತ, ಸಾಂತಾಕ್ರೂಜ್ ಪೂರ್ವದ ಆನಂದ ನಗರದ ನಿವಾಸಿ ಉಮೇಶ್ ದೇಜು ಕೋಟ್ಯಾನ್ (52) ಅವರು ಹೃದಯಾಘಾತದಿಂದ ಅ. 6ರಂದು ನಿಧನರಾದರು. ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಬಿಲ್ಲವರ ಎಸೋಸಿಯೇಶನ್ ಮುಂಬಯಿ  ಇದರ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿರುವರು. ಮೃತರು ತಂದೆ, ತಾಯಿ, ಇಬ್ಬರುಸಹೋದರರು, ಸಹೋದರಿಯರು ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.
IMG-20151007-WA0016

ಮೃತರ ನಿಧನಕ್ಕೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಬಿಲ್ಲವರ ಎಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ.ಕಾರ್ಯದರ್ಶಿ ಧರ್ಮಪಾಲ್ ಜಿ.ಅಂಚನ್, ಮಾಜಿ ಅಧ್ಯಕ್ಷ ಎಲ್.ವಿ.ಅಮೀನ್ ಹಾಗೂ ಸರ್ವ ಸದಸ್ಯರು ಮತ್ತು ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅಗಲಿದ ದಿವ್ಯಾತ್ಮಕ್ಕೆ ಶೋಕ ವ್ಯಕ್ತಪಡಿಸಿದ್ಡಾರೆ. ಮೃತರ ಅಂತಿಮ ಸಂಸ್ಕಾರವು ಇಂದಿಲ್ಲಿ ಬುಧವಾರ (07.10.2015)ರಂದು ಬೆಳಿಗ್ಗೆ ಸಾಂತ್ರಾಕ್ರೂಜ್ ಪೂರ್ವದಲ್ಲಿ ನೇರವೇರಿತು.

By suddi9

Leave a Reply

Your email address will not be published. Required fields are marked *