ಕೈಕಂಬ: ವಾಮಂಜೂರು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ಇದರ ಆಶ್ರಯದಲ್ಲಿ  ತಿರುವೈಲ್ ವಾರ್ಡ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಣವ ಸೌಹಾರ್ದ ಸಹಕಾರಿ ಯೆಯ್ಯಡಿ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಣಿಪಾಲ ದಂತ ಮಹಾ ವಿದ್ಯಾಲಯ ಇವರಿಂದ ಉಚಿತ ದಂತ ತಪಾಸಣಾ ಶಿಬಿರ ಹಾಗೂ ಕೆ ಎಸ್ ಹೆಗ್ಡೆ ವೈದಕೀಯ ಮಹಾ ವಿದ್ಯಾಲಯದವ ವೈಧ್ಯರುಗಳಿಂಬದ ಉಚಿತ ಆರೋಗ್ಯ ತಪಾಸಣೆಯು ಮತ್ತು ಜೈ ಶಂಕರ್ ಮಿತ್ರಮಂಡಳಿ ಅವ ಕೊಡುಗೆಯಾಗಿ ನೀಡಿದ ಉಚಿತ ಆಂಬುಲೆನ್ಸ್ ಸೇವೆ ಲೋಕಾರ್ಪಣೆಯು ಅ.4ರಂದು ಭಾನುವಾರ ದ.ಕ.ಜಿ.ಪ. ಹಿರಿಯ ಪ್ರಾಥಮಿಕಶಾಲೆ ವಾಮಂಜೂರಿನ ತಿರುವೈಲ್ ನಲ್ಲಿ ಜರಗಿತು. ಮಂಗಳೂರು ಗ್ರಾಮಾಂತರ ಆರಕ್ಷಕ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಜೈ ಶಂಕರ್ ಮಿತ್ರಮಂಡಳಿ ಅವರು ಕೊಡುಗೆಯಾಗಿ ನೀಡಿದ ಉಚಿತ ಆಂಬುಲೆನ್ಸ್ ಲೋಕಾರ್ಪಣೆಗೈದರು. ರಕ್ತದಾನ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಸೌಹಾರ್ದ ಸಹಾಕಾರಿ ಮಂಡಳಿ ಬೆಂಗಳೂರು ನಿರ್ದೇಶಕ ಕೆ.ಆರ್ ಸತೀಶ್ಚಂದ್ರ ಉದ್ಘಾಟಿಸಿದರು.

1 2 3
8 9 10 16 09 01 02 03 04 05 06 07 08001
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿರುವೈಲ್ ವಾರ್ಡ ಕಾರ್ಪೊರೆಟರ್ ಹೇಮಲತಾ ರಘು ಸಾಲಿಯಾನ್ ವಹಿಸಿದ್ದರು. ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಮತ್ತು ಇಸ್ಲಾಹುಲ್ ಇಸ್ಲಾಂ ಜುಮಾ ಮಸೀದಿ ವಾಮಂಜೂರಿನ ಅಬೂಬಕ್ಕರ್ ಮುಸ್ಲೀಯರ್ , ವಾಮಂಜೂರು ಸಂತ ಜೋಸೆಫರ ದೇವಾಲಯದ ವಂ/ ಫಾ.ಸಿಪ್ರಿಯಾನ್ ಪಿಂಟೋ , ತಿರುವೈಲ್ ಪೀಟರ್ ಸ್ಮಾರಕ ದೇವಾಲಯ ರೆವೆ| ಡೇನಿಯಲ್ ಕೌಂಡಿನ್ಯ ಅವರುಗಳು ಆಶೀರ್ವಚಿಸಿದರು. ವೇದಿಕೆಯಲ್ಲಿ ಜೈಶಂಕರ್ ಮಿತ್ರ ಮಂಡಳಿಯ ಗೌರವಧ್ಯಕ್ಷ ಕೆ.ಗಂಗಯ್ಯ ಅಮೀನ್ ,ಅಧ್ಯಕ್ಷ ಗಿರೀಶ ಆಚಾರ್ಯ, ವಾಮಂಜೂರು ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಬಂಗೇರಾ, ಶ್ರೀ ರಾಮ ಬಜನಾ ಮಂಡಳಿ ಹಿಂದೂ ಸೇವಾ ಸಮಾಜದ ಅಧ್ಯಕ್ಷರು. ರಾಜೇಶ್ ಕೊಟ್ಟಾರಿ ಇವರು ಉಪಸ್ಥಿತರಿದ್ದರು. ಖ್ಯಾತ ವೈದ್ಯರುಗಳಾದ ಇ. ಎನ್. ಟಿ. ಸ್ಟಷಲಿಸ್ಟ್ ಡಾ. ದಯಾಕರ ಪೂಂಜ, ವಾಮಂಜೂರು ಮಲ್ಯ ಕ್ಲನಿಕ್ನ ಡಾ. ಸತೀಶ್ ಮಲ್ಯ , ರೋಶನಿ ಪ್ಯಾಮಿಲಿ ಕ್ಲಿನಿಕ್ ವಾಮಂಜೂರು ಡಾ. ಕೆ.ಬಿ.ಶೆಟ್ಟಿ, ವಾಮಂಜೂರು ಅಮೃತೇಶ್ವರ ಔಷದಾಲಯದ ನಾಗರಾಜ ಪಂಡಿತ್ , ಕೊಂಗೂರ್  ಕ್ನಿನಿಕ್ ವಾಮಂಜೂರು ಡಾ. ಪ್ರಭಾತಾ, ಆಯುರ್ವೇದ ಸ್ಪೆಷಲಿಸ್ಟ್ ಕ್ಲಿನಿಕ್ ವಾಮಂಜೂರು ಡಾ. ಕಾರ್ತಿಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೋಪಾಲ ಯು. ಸ್ವಾಗತಿಸಿ, ರಾಜ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು. ಉಮೇಶ್ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *