ಮೂಡುಬಿದರೆ: ಮಹಿಳಾ ಗ್ರಾಮಸಭೆಯ ಮೂಲಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಲು ಮತ್ತು ಅಭಿಪ್ರಾಯ ಮಂಡನೆಗೆ ಅವಕಾಶ ಲಭಿಸಿದೆ. ಸಮಾಜಮುಖಿಯಾಗುವುದರ ಜೊತೆಗೆ ಸ್ವಾಲಂಬಿ ಜೀವನಕ್ಕೆ ಇದು ಮಾರ್ಗದರ್ಶಿಯಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.
ತೆಂಕಮಿಜಾರು ಗ್ರಾ.ಪಂ ವತಿಯಿಂದ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಮಹಿಳಾ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
mbd_oct2_6ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು. ತೆಂಕಮಿಜಾರು ಗ್ರಾಮದ ಕಡ್ಪಲಗುರಿಯ ನಿವಾಸಿ ನಾಟಿವೈದ್ಯೆ ದೊಂಬಿಬಾಯಿ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಡಿಸ್, ಪೈಪ್ ಕಾಂಪೋಸ್ಟ್ ಬಗ್ಗೆ ವೀಡಿಯೋ ಕ್ಲಿಪಿಂಗ್ ಬಿಡುಗಡೆಗೊಳಿಸಿದರು. ಬಡಗ ಮಿಜಾರು ಗ್ರಾಮದ ಬಂಗಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಶಿಕಲಾ ಅವರು ರಾಗ ಸಂಯೋಜನೆ ಮಾಡಿ ಹಾಡಿರುವ ಅಂಗನವಾಡಿ ಶಿಶು ಗೀತೆಗಳ ಸಿಡಿಯನ್ನು ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ ಅವರು ಬಿಡುಗಡೆಗೊಳಿಸಿದರು. ಗ್ರಾಮದ ಇಬ್ಬರು ಮಹಿಳೆಯರಿಗೆ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಪೈಪ್‍ಗಳನ್ನು ವಿತರಿಸಲಾಯಿತು.
ಸ್ವಚ್ಛ ಭಾರತ್ ಮಿಷನ್‍ನ ಮಂಗಳೂರು ಜಿ.ಪಂನ ಜಿಲ್ಲಾ ಸಂಯೋಜಕಿ ಮಂಜುಳಾ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಬಿ.ಎನ್.ವೈ.ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ `ದೈನಂದಿನ ಬದುಕಿನಲ್ಲಿ ಮಹಿಳೆಯರ ಆರೋಗ್ಯ ಜಾಗೃತಿ, ವಕೀಲೆ ಗೌರಿ, `ಮಹಿಳೆಯರ ಹಕ್ಕುಗಳು ಮತ್ತು ರಕ್ಷಣೆ, `ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆ’ ಬಗ್ಗೆ ಆಳ್ವಾಸ್ ಇಂಜಿನಿಯರಿಂಗ್ ಆಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ದುರ್ಗಾಪ್ರಸಾದ್ ಬಾಳಿಗಾ ಮಾಹಿತಿ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಹೇಮಾವತಿ ಕುಲಾಲ್ ಉಪಸ್ಥಿತರಿದ್ದರು. ಪಿಡಿಓ ಯೀಶ ಚೌಟ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿದರು. ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಮಹಿಳೆಯರ ಆರೋಗ್ಯ ತಪಾಸಣೆ ನಡೆಯಿತು.

By suddi9

Leave a Reply

Your email address will not be published. Required fields are marked *