ಬಂಟ್ವಾಳ: ಸುಮನಸ ಯಕ್ಷಬಳಗ ಬಂಟ್ವಾಳ ಇವರು ಪ್ರಥಮವಾಗಿ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಲಲಿತಪಂಚಮಿಯಂದು (ಅಕ್ಟೋಬರ್ 18ರಂದು) `ಶ್ರೀದೇವಿ ವೈಷ್ಣವಿ’ ಎಂಬ ಯಕ್ಷಗಾನ ಬಯಲಾಟ ಆಡಿ ತೋರಿಸುವರು.
ಯಕ್ಷಗುರು ಯೋಗೀಶ್ ಅಳದಂಗಡಿಯವರು ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಯೋಗೀಶ್ ಅಳದಂಗಡಿ, ಚಿನ್ಮಯ ಕಲ್ಲಡ್ಕ, ಚೆಂಡೆಯಲ್ಲಿ ರಾಜೇಶ್ ಮಡಂತ್ಯಾರು, ಮದ್ದಲೆಯಲ್ಲಿ ವೆಂಕಟೇಶ್ ಶೆಟ್ಟಿ ಮೂರ್ಜೆ, ಚಕ್ರತಾಳದಲ್ಲಿ ಚಿನ್ಮಯ ಕಲ್ಲಡ್ಕ ಹಾಗೂ ಮುಮ್ಮೇಳದಲ್ಲಿ ಶ್ರೀಮತಿ ಭಾರತಿವಸಂತ ಕುಮಾರ್, ಕು| ದೀಪಿಕಾಪ್ರಿಯಾ ಬಂಟ್ವಾಳ, ಶಿವಪ್ರಸಾದ್ ಉಜಿರೆ, ಕು| ಕವಿತಾ ಭಂಡಾರಿಬೆಟ್ಟು, ಕು| ಪೂರ್ಣಿಮಾ, ಭಂಡಾರಿಬೆಟ್ಟು, ಕು| ಪೂಜಾಶ್ರೀ ದೈಪಲ, ಕು| ಅಶ್ವಿತಾ, ಯಾದವ ಅಗ್ರಬೈಲು, ಕು| ಯಶ್ವಿ, ಕು| ಸಾತ್ವಿಕಾ ವಿ. ಕುಮಾರ್, ಮಾ| ಆದಿತ್ಯ ಎಲ್. ಅಗ್ರಬೈಲು, ಮಾ| ಕೃತಿಕ್ ಕುಮಾರ್ ವೈ.ಎಸ್. ಬಡ್ಡಕಟ್ಟೆ ಎಂದು ಬಳಗದ ಸಂಚಾಲಕಿ ಕವಿತಾ ಅಗ್ರಬೈಲು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *