ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಬಟೂರಿನಲ್ಲಿ ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿದ್ದು, ತಾಯಿಯ ಅಂತ್ಯಸಂಸ್ಕಾರ ಸಂದರ್ಭದಲ್ಲೂ ಕೂಡ ಸಹೋದರರ ನಡುವೆ ಜಗಳ ತಾರಕಕ್ಕೇರಿದೆ.

shaku

 

ಕುಮಾರ ಬಂಗಾರಪ್ಪ ಈ ಮನೆಗೆ ಬರಬಾರದು ಎಂದು ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ‘ಬಂಗಾರ’ ನಿವಾಸದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಮಧು ಬಂಗಾರಪ್ಪ ಬೆಂಬಲಿಗರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದರು.ಈ ನಡುವೆ ಶಕುಂತಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆಯ ವಿಧಿವಿಧಾನವನ್ನು ಯಾರು ನಡೆಸಬೇಕು ಎನ್ನುವುದೇ ಗೊಂದಲ ಉಂಟಾಗಿದೆ.ಹಿರಿಯ ಪುತ್ರರಾಗಿ ಕುಮಾರ್ ಬಂಗಾರಪ್ಪ ಅವರಿಗೆ ಅಂತ್ಯಕ್ರಿಯೆ ವಿಧಿವಿಧಾನ ನಡೆಸುವ ಎಲ್ಲಾ ಹಕ್ಕುಗಳು ಇವೆ ಎಂದು ಕುಮಾರ್ ಬಂಗಾರಪ್ಪ ಪರ ಬೆಂಬಲಿಗರು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *