ಬಂಟ್ವಾಳ: ಮುತ್ತೂಟ್ ಪೈನಾನ್ಸ್ ಬಿ.ಸಿ.ರೋಡು ಶಾಖೆಯಲ್ಲಿ ಸರಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಫ್ ವಿತರಣೆ ಹಾಗೂ ಮೆಹಂದಿ ಸ್ಪರ್ಧೆ ನಡೆಯಿತು. ಶಾಖಾ ಪ್ರಬಂಧಕಿ ಅರ್ಪಿತಾ ಶೆಟ್ಟಿ ತಾಲೂಕಿನ 35 ಮಕ್ಕಳಿಗೆ ಸ್ಕಾಲರ್‍ಶಿಫ್ ವಿತರಿಸಿ ಮಾತನಾಡಿ ದ.ಕ.ಜಿಲ್ಲೆಯ 167 ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸ್ಕಾಲರ್‍ಶಿಫ್ ವಿತರಿಸಲಾಗುತ್ತಿದೆ.

mututu

ಮಕ್ಕಳಿಗೆ ವಿವಿದೆಡೆ ಇರುವ ಸಂಸ್ಥೆಯ ಶಾಖೆಗಳಲ್ಲೇ ಸ್ಕಾಲರ್‍ಶಿಫ್ ವಿತರಿಸಲಾಗುತ್ತಿದೆ ಎಂದರು. ಕಂಪನಿಯ ರೀಜನಲ್ ಸೇಲ್ಸ್ ಮ್ಯಾನೇಜರ್ ರವಿರಾಜ್ ಶೆಟ್ಟಿ ಸಂಸ್ಥೆಯಿಂದ ಸಿಗುವ ಸವಲತ್ತುಗಳು, ಸೇವಾ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ನಾರ್ಶ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ರಾವ್ ಬಿ., ಅಜ್ಜಿಬೆಟ್ಟು ಶಾಲಾ ಮುಖ್ಯ ಶಿಕ್ಷಕಿ ಸುಧಾ ಉಪಸ್ಥಿತರಿದ್ದರು. ಇದೇ ಸಂದರ್ಭ ನಡೆದ ಮೆಹಂದಿ ಸ್ಪರ್ಧೆಯಲ್ಲಿ ಪುಷ್ಪಾ ಬಂಟ್ವಾಳ ಪ್ರಥಮ ಹಾಗೂ ಅಜ್ಮೀಯಾ ದ್ವಿತೀಯ ಸ್ಥಾನ ಪಡೆದರು. ಇನೆಟ್ ಸಲ್ದಾನಾ ತೀರ್ಪುಗಾರರಾಗಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *