ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಪಾಂಗಲ್ಪಾಡಿ-ಕೊರಗಟ್ಟೆ ರಸ್ತೆ ಸಂಪರ್ಕಿಸುವಲ್ಲಿ ಬಜೆ ದಿ.ಗುಮ್ಮಣ್ಣ ಶೆಟ್ಟಿ ಮತ್ತು ದಿ.ಸೇಸಿ ಶೆಡ್ತಿ ಸ್ಮರಣಾರ್ಥ ಬಜೆ ಕುಟುಂಬಿಕರು ಸುಮಾರು ಒಂದೂವರೆ ಲ.ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ರವಿವಾರ ಜರಗಿತು.
ಉದ್ಯಮಿ ನಡಿಗುತ್ತು ತಿಮ್ಮಪ್ಪ ನಾಯ್ಕ್ ಅವರು ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ,ನಿವೃತ್ತ ತಹಶೀಲ್ದಾರ ರಘುಪತಿ ಶಾಸ್ತ್ರಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವನವೆಂಬ ತಿರುಗಾಟದಲ್ಲಿ ಅಂತಿಮ ಗಮ್ಯದ ನೆಲೆ ನಮ್ಮೆಲ್ಲರ ಧ್ಯೇಯವಾದಂತೆ ತಿರುಗಾಟವೆಂಬುದು ಮನುಷ್ಯನ ಜೀವನದ ಭಾಗವಾಗಿದ್ದು ಈ ವೇಳೆ ವಿಶ್ರಾಂತಿಯ ನೆಲೆಯೂ ಆವಶ್ಯಕವಾಗಿದೆ. ದೇವರು ದೇವಸ್ಥಾನದಿಂದ ತಿರುಗಾಟ ಸಮಯದಲ್ಲಿ ಕಟ್ಟೆಯಲ್ಲಿ ವಿಶ್ರಮಿಸುವಂತೆ ಮಾನವ ವಿಶ್ರಾಂತಿ ನೆಲೆಯೂ ಪುಣ್ಯಸ್ಥಳವಾಗಿದೆ.ಇಂತಹ ಪುಣ್ಯ ಕಾರ್ಯ ಮಾಡಿದ ಬಜೆ ಕುಟುಂಬಸ್ಥರು ಅಭಿನಂದಾರ್ಹರು ಎಂದು ಹೇಳಿದರು.

ತನ್ನ ಸ್ಥಳದಲ್ಲಿ ದೇವರ ಕಟ್ಟೆ ಗೆ ಅವಕಾಶ ಹೊಂದಿದ ಬಜೆ ಗುಮ್ಮಣ್ಣ ಶೆಟ್ಟಿ ಅವರ ಸ್ಮರಣಾರ್ಥ ಮತ್ತು 25 ವರ್ಷಗಳ ಹಿಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾಗಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಿದ ಬಜೆ ಸುಂದರ ಶೆಟ್ಟಿ ಅವರಿಂದ ಇಂದು ಬಸ್ ತಂಗುದಾಣ ನಿರ್ಮಾಣವಾಗಿರುವುದು ಯೋಗ ಎಂದು ಅವರು ಸ್ಮರಿಸಿದರು.
ಚೆನ್ನೈತ್ತೋಡಿ ಗ್ರಾ.ಪಂ.ಆಭಿವೃದ್ಧಿ ಅ„ಕಾರಿ ಧರ್ಮರಾಜ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಸಮಾಜಸೇವೆಯ ಮೂಲಕ ಮಾತಾಪಿತರ ಋಣ ತೀರಿಸುವುದು ಉತ್ತಮ ಕಾರ್ಯ.ತಂಗುದಾಣ ನಿರ್ಮಾಣ ಈ ಭಾಗದ ಜನರಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.ಗ್ರಾ.ಪಂ.ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ,ಗ್ರಾ.ಪಂ.ಸ್ಥಳೀಯ ಸದಸ್ಯ ಉದಯ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಬಜೆ ಸುಂದರ ಶೆಟ್ಟಿ ,ಅವರ ಪತ್ನಿ ರತ್ನಾವತಿ ಶೆಟ್ಟಿ ,ಪುತ್ರ ರಮೇಶ್ ಶೆಟ್ಟಿ ಬಜೆ, ಪ್ರಮುಖರಾದ ಜಗನ್ನಾಥ ಶೆಟ್ಟಿ,ಮಹಾಬಲ ರೈ ಬೋಳಂತೂರು,ಉಗ್ಗಪ್ಪ ಶೆಟ್ಟಿ ಸರಪಾಡಿ,ಮಡ್ಯಾರುಗುತ್ತು ವಿಶ್ವನಾಥ ಶೆಟ್ಟಿ ಅಮ್ಮು ರೈ ಹರ್ಕಾಡಿ,ನವೀನಚಂದ್ರ ಶೆಟ್ಟಿ,ವಿಜಯ ರೈ ಆಲದಪದವು,ಮೋಹನ್ ರೈ,ಪ್ರಕಾಶ್ ಆಳ್ವ ,ವಸಂತ ಶೆಟ್ಟಿ ಕೇದಗೆ ಹಾಗು ಬಜೆ ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಎಂ.ರಾಜೀವ ಶೆಟ್ಟಿ ಎಡ್ತೂರು ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ದೇವಪ್ಪ ಶೆಟ್ಟಿ ಕುಂಟಜಾಲು ವಂದಿಸಿದರು.
