ಮುಂಬಯಿ: ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತಿ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ ಪೂಜಿಸಲ್ಪಡುವ ಶ್ರೀ ವಿನಾಯಕನ ದರ್ಶನವನ್ನು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮತ್ತು ವಿನೋದಾ ವಿದ್ಯಾಸಾಗರ್ ದಂಪತಿ ಪಡೆದರು. ರಾಜ್ಯಪಾಲರು ಶ್ರೀರಾಮ ಮಂದಿದಲ್ಲಿ ಆಚರಿಸಲ್ಪಡುವ ಗಣೇಶೋತ್ಸವ ಆರಾಧನೆಯಲ್ಲಿ ಪಾಲ್ಗೊಂಡು ಶ್ರೀ ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ವಿಶ್ವಸ್ಥ ಕಾರ್ಯಾಧ್ಯಕ್ಷ ಎನ್.ಎನ್.ಪಾಲ್ ರಾಜ್ಯಪಾಲ ಅವರನ್ನು ಸಾಂಪ್ರದಾಯಿಕವಾಗಿ ಸ್ಮರಣಿಕೆಯನ್ನಿತ್ತು ಫಲಪುಷ್ಪಗಳನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಮುಂದಾಳುಗಳಾದ ಎಂ.ವಿ ಕಿಣಿ, ಉಲ್ಲಾಸ್ ಡಿ.ಕಾಮತ್, ಗೋವಿಂದ್ ಎಸ್.ಭಟ್, ಸುಭಾಶ್ ಪೈ, ಸುನೀಲ್ ಪೈ, ಅಕ್ಷಯ್ ಪೈ ಸೇರಿದಂತೆ ಅನೇಕ ಗಣ್ಯರು
ಉಪಸ್ಥಿತರಿದ್ದರು. ಭಾನುವಾರ ಅನಂತ ಚತುರ್ದಶಿ ದಿನ ಈ ಗಣಪತಿ ವಿಸರ್ಜನೆಗೊಳಿಸಲ್ಪಟ್ಟಿತು.
