ಮುಂಬಯಿ: ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 9ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಇದೇ ಬರುವ ಅ.2ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರೇತಿ ಭವನ, 3ನೇ ಮಹಡಿ, ರೈಲ್ವೇ ನಿಲ್ದಾಣದಸಮೀಪ,ಡೊಂಬಿವಲಿಪಶ್ಚಿಮಇಲ್ಲಿ ನೇರವೇರಿಸಲಾಗುವುದು ಎಂದು ಮಂಡಳಿಯ ಪದಾಧಿಕಾರಿಗಳ ಪರವಾಗಿ ಕಾರ್ಯಾಧ್ಯಕ್ಷ ಗಣೇಶ ಮೊಗವೀರತಿಳಿಸಿದ್ದಾರೆ.
ಮಂಡಳಿಯ ಸದಸ್ಯರು, ಪರಿಸರದ ತುಳು ಕನ್ನಡಿಗರು ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ತೀರ್ಥ ಪ್ರಸಾದ, ಮಹಾಪ್ರಸಾದ, ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸಾಯಿನಾಥ ಮಿತ್ರ ಮಂಡಳಿಯ ಪರವಾಗಿ ಪೂಜಾ ಸಮಿತಿಯ ಅಧ್ಯಕ್ಷ ವಿಶಾಲ ಎಂ.ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಮೊಗವೀರ, ಕಾರ್ಯದರ್ಶಿ ಮೋಹನ್ ಜಿ.ಸಾಲ್ಯಾನ್, ಜೊತೆ ಕಾರ್ಯದರ್ಶಿ ಸಂಜಯ ಹೆಗ್ಡೆ, ಕೋಶಾಧಿಕಾರಿ ನಾರಾಯಣ ಸನಿಲ್, ಜೊತೆ ಕೋಶಾಧಿಕಾರಿ ರಘುರಾಮ ಶೆಟ್ಟಿ ಹಾಗ್ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ.

