ಕೈಕಂಬ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮಂಗಳೂರು, ಹೈನುಗಾರಿಕಾ ವಿಚಾರ ಸಂಕಿರಣ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುರುಪುರ ವಲಯ, ವ್ಯವಸಾಯ ಸೇವಾ ಸಹಕಾರಿ ಸಂಘ ಗುರುಪುರ ಹಾಗೂ ಉತ್ಪಾದಕರ ಮಹಿಳಾ ಸಂಘ ಕುಕ್ಕುದಕಟ್ಟೆ ಹಾಗೂ ನೂಯಿ ಇವರ ಸಂಯುಕ್ತ ಆಶ್ರಯದಲ್ಲಿ ಹೈನುಗಾರಿಕಾ ವಿಚಾರ ಸಂಕಿರಣ -2015 ಕಾರ್ಯಕ್ರಮವು ಇತ್ತೀಚೆಗೆ ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ವಕೀಲರು ಹಾಗೂ ಪ್ರಗತಿಪರ ಹೈನುಗಾರರಾದ ಸುಶ್ರತಾರಾವ್ ಕಳಸಗುರಿ ಕಾರ್ಯಕ್ರಮನ್ನು ದೀಪ ಬೆಳಗಿಸಿ ಉದ್ಘಾಟಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಭಂಡಾರಿಯವರು ವಹಿಸಿದ್ದರು.

2copy

26vp vichara sankirana
ಮುಖ್ಯ ಅಥಿತಿಗಳಾಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಗುರುಪುರ ಇದರ ಅಧ್ಯಕ್ಷರು ವಿನಯ್ ಶೆಟ್ಟಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಕೃಷಿ ಅಧಕಾರಿಗಳು ಜನಾರ್ಧನ, ಕುಕ್ಕುದಕಟ್ಟೆ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷೆ ಸುಜಾತ, ನೂಯಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಹರಿಣಾಕ್ಷೀ, ಪ್ರಬಂಧಕಿ ನಿರಂಜಯ ಉಪಸ್ಥಿತರಿದ್ದರು.
ನಂತರ ನಡೆದ ಕೃಷಿ ಹಾಗೂ ಹೈನುಗಾರಿಕಾ ವಿಚಾರದಲ್ಲಿ ಡಾ.ಶಿವಣ್ಣ ಪಶುವೈದ್ಯಾಧಿಕಾರಿ ವಾಮಂಜೂರು, ವಿಕ್ರಂ ಕೃಷಿಅಧಿಕಾರಿಗಳು ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರೊಂದಿಗೆ ಚರ್ಚಿಸಲಾಯಿತು.
ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್‍ನ ಕೌನ್ಸೆಲರ್ ಸತೀಸ್ ಅತ್ತಾವರ ಇವರು ಜನಧನ, ಸುಕನ್ಯಾ ಸಮೃದ್ಧಿ, ಜೀವನಜ್ಯೋತಿವಿಮಾಯೋಜನೆ ಹಾಗೂ ಸುರಕ್ಷಾ ಸಮೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕುಮಾರಿ ಕವಿತಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕರಾದ ಎಮ್. ಕೃಷ್ಣಪ್ಪ ಸ್ವಾಗತಿಸಿದರು. ಶೋಭಾ ದಾಮೋಧರ್ ಧನ್ಯವಾವಿತ್ತರು.
26ವಿಪಿ ವಿಚಾರ ಸಂರ್ಕಿರಣ ಕಾರ್ಯಕ್ರಮ

By suddi9

Leave a Reply

Your email address will not be published. Required fields are marked *